“Author Archive”
Stories written by ( ಅಶ್ರಫ್ ಮಂಜ್ರಾಬಾದ್ )

ಇಂದು ದ್ವಿತೀಯ ಪಿಯುಸಿ ಸಿಬಿಎಸ್‌ಇ ಫಲಿತಾಂಶ

images

ನವದೆಹಲಿ ( ವಿಶ್ವ ಕನ್ನಡಿಗ ನ್ಯೂಸ್) : ಸಿಬಿಎಸ್‌ಇ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಫಲಿತಾಂಶವನ್ನು ಅಂತರ್ಜಾಲದಲ್ಲಿ ಸಹ ನೋಡಬಹುದಾಗಿದ್ದು ಈ ಕೆಳಕಂಡ ಲಿಂಕ್ http://www.cbseresults.nic.in/ ಕ್ಲಿಕ್ ಮಾಡುವುದರ ಮೂಲಕ ಫಲಿತಾಂಶವನ್ನು ನೋಡಬಹುದಾಗಿದೆ. ಸಿಬಿಎಸ್‌ಇ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ ಒಂದರಿಂದ ಏಪ್ರಿಲ್ ಹದಿನೇಳರವರೆಗೆ ನಡೆದಿತ್ತು.

May 27 2013 09:39:09 AM | Posted in ದೆಹಲಿ,ರಾಷ್ಟ್ರೀಯ ಸುದ್ದಿಗಳು | Read More »

ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ದಮ್ಮಾಂ 24 ನೆ ವಾರ್ಷಿಕೋತ್ಸವ

VK News new logo1

ದಮ್ಮಾಂ; ಸೌದಿ ಅರೇಬಿಯ ( ವಿಶ್ವ ಕನ್ನಡಿಗ ನ್ಯೂಸ್) : ಕೆಯಂವೈಎ ದಮ್ಮಾಂ, ಕೋಬರ್, ಜುಬೈಲ್ ಗಳ 24 ನೆ ವಾರ್ಷಿಕೋತ್ಸವ 30-03-2013 ಶುಕ್ರವಾರ ಜುಮಾ ನಮಾಝಿನ ಬಳಿಕ ದಮಾಂ ಹೋಟೆಲ್ ರೋಸ್ ಆಡಿಟೊರಿಯಂ ನಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಸಂಘದ ಪ್ರಪ್ರಥಮ ಅಧ್ಯಕ್ಷ ಪಿ.ಅಬ್ದುಲ್ ಹಮೀದ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯು ಉಪಾಧ್ಯಕ್ಷ ಇಸ್ಮಾಯೀಲ್ ಕಾಟಿಪಳ್ಳ ರವರ ಖಿರಾ ಅತ್ ನೊಂದಿಗೆ ಪ್ರಾರಂಭಗೊಂಡಿತು. ಸಂಘದ ಅಧ್ಯಕ್ಷ ಟಿ.ಎ.ಖಾದರ್, ಮಾಜಿ ಅಧ್ಯಕ್ಷರುಗಳಾದ ಖಾಲಿದ್ ಹಂಝ,ಎಸ್.ಎ. ಅಝೀಝ್, [...]

May 2 2013 06:17:18 PM | Posted in ಗಲ್ಫ್ ಸುದ್ದಿಗಳು | Read More »

ಪಾಕ್ ಆಸ್ಪತ್ರೆಯಲ್ಲಿ ಸರಬ್ಜಿತ್ ಸಿಂಗ್ ಸಾವು

images

ಲಾಹೋರ್ ( ವಿಶ್ವ ಕನ್ನಡಿಗ ನ್ಯೂಸ್ ) : ಪಾಕಿಸ್ತಾನದ ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೆ ಒಳಗಾಗಿದ್ದ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದದ್ದಾಗಿ ಲಾಹೋರಿನ ಜಿನ್ನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ . 49 ವರ್ಷ ಪ್ರಾಯದ ಸರಬ್ಜಿತ್ ಸಿಂಗ್ ನನ್ನು ಶುಕ್ರವಾರದಿಂದ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ  ದಾಖಲಿಸಲಾಗಿತ್ತು . ಆರು ಮಂದಿ ಸಹ ಕೈದಿಗಳು ಊಟದ ತಟ್ಟೆ ಮತ್ತು ಇಟ್ಟಿಗೆಗಳ ಮೂಲಕ್ ಸರಬ್ಜಿತ್ ಸಿಂಗ್ ಮೇಲೆ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ [...]

May 2 2013 04:59:17 AM | Posted in Editor Only,ವಿದೇಶ ಸುದ್ದಿಗಳು | Read More »

ಸಕಲೇಶಪುರ : ದಲಿತ , ಲಿಂಗಾಯಿತ ,ಒಕ್ಕಲಿಗ ಮತ್ತು ಮುಸ್ಲಿಂ ಮತಗಳು ಕೆಜೆಪಿ ಪಕ್ಷಕ್ಕೆ ಜಯ ತಂದು ಕೊಡಲಿದೆಯೇ ?

kjp

ಸಕಲೇಶಪುರ ( ವಿಶ್ವ ಕನ್ನಡಿಗ ನ್ಯೂಸ್ ) : ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದು ಕಾಫಿಯ ನಾಡು ಸಕಲೇಶಪುರದಲ್ಲಿ ಈ ಬಾರಿ ಜೆಡಿಎಸ್ ಕೋಟೆಯನ್ನು ಒಡೆಯಲು ಯುಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಸಜ್ಜಾಗಿದೆ . ಮಾಜಿ ಶಾಸಕ ಹಾಗೂ ಜೆಡಿಎಸ್ ನಾಯಕ ಹೆಚ್.ಎಂ ವಿಶ್ವನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಆರ್. ಗುರುದೇವ್ ನೇತೃತ್ವದಲ್ಲಿ ಕೆಜೆಪಿ ಅಭ್ಯರ್ಥಿ ಬೆಳಗೋಡು ಉಮೇಶ್ ಪರ ಪ್ರಚಾರ ಜೋರಾಗಿದ್ದು ಮೊನ್ನೆ ಯುಡಿಯೂರಪ್ಪ ಮಾಡಿದ ಬಿರುಸಿನ ಪ್ರಚಾರ [...]

May 1 2013 02:22:09 PM | Posted in Editor Only,ರಾಜ್ಯ ಸುದ್ದಿಗಳು,ಲೇಖನಗಳು | Read More »

ಎಸ್.ಡಿ.ಪಿ.ಐ ಸ್ಪರ್ಧೆಯ ಬಗ್ಗೆ ಏಕಿಷ್ಟು ಆತಂಕ ?

sdpi

ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ಏರುತ್ತಿದ್ದು ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ತೊಡಗುವುದರ ಜೊತೆಗೆ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳಲ್ಲೂ ನಿರತವಾಗಿದೆ . ಮೊದಲಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಎಂದು ಭಾವಿಸಲಾಗಿದ್ದರೆ ಇದೀಗ ಎಸ್.ಡಿ .ಪಿ. ಐ ಸಹ ಪ್ರಬಲ ಸ್ಪರ್ಧಿ ಎನ್ನುವುದನ್ನು ಅದರ ಬಗ್ಗೆ ಇನ್ನಿತರ ಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಗಳೇ ಸಾಬೀತು ಪಡಿಸುತ್ತಿವೆ . ಕಾಂಗ್ರೆಸ್ ಪಕ್ಷದ [...]

April 30 2013 07:58:55 PM | Posted in Editor Only,ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು,ಲೇಖನಗಳು | Read More »

ಮಂಗಳೂರು : ಲಾರಿಯಡಿ ಮಲಗಿದ್ದ ಚಾಲಕರಿಗೆ ಇರಿತ , ಓರ್ವನ ಮೃತ್ಯು , ಇಬ್ಬರು ಗಂಭೀರ

bloody_knife009copy1

ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಯ ಕೆಳಗೆ ಮಲಗಿದ್ದ ಚಾಲಕರ ಮೇಲೆ ಚಾಕುವಿನಿಂದ ಇರಿದು ಅವರ ಬಳಿ ಇದ್ದ ಹಣ ದೋಚಿದ ಘಟನೆ ಸೋಮವಾರ ರಾತ್ರಿ ನಡೆದಿದ್ದು ಘಟನೆಯಲ್ಲಿ ಒಬ್ಬ ಚಾಲಕ ಮೃತಪಟ್ಟರೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ . ಬಸವರಾಜ್ , ಹಸನ್ ಎಂಬ ಇಬ್ಬರು ಚಾಲಕರು ಲಾರಿ ನಿಲ್ಲಿಸಿ ಮಲಗಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಬಂದ [...]

April 30 2013 06:07:08 PM | Posted in Editor Only,ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ಮಂಗಳೂರಿನಲ್ಲಿ ಚುನಾವಣಾಧಿಕಾರಿಗಳಿಂದ 63 ಲಕ್ಷ ರೂಪಾಯಿ ವಶ

ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಚುನಾವಣಾಧಿಕಾರಿಗಳು ನಗರದ ಫ್ಲಾಟ್ ಒಂದರ ಮೇಲೆ ನಡೆಸಿದ ದಿಢೀರ್ ದಾಳಿಯಲ್ಲಿ ಮನೆಯಲ್ಲಿದ್ದ 63 ಲಕ್ಷ ರೂಪಾಯಿಗಳನ್ನು ವಶ ಪಡಿಸಿಕೊಂಡಿದ್ದಾರೆ . ನಗರದ ಅತ್ತಾವರದಲ್ಲಿರುವ ಗೋಲ್ಡನ್ ಕಾಸ್ತಲ್ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಉದ್ಯಮಿ ಯು.ಎನ್. ಅಬ್ದುಲ್ ರಜಾಕ್ ಅವರ ಪುತ್ರಿಯ ಮನೆಯಲ್ಲಿದ್ದ 63 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದುಕೊಂಡರು . ಅಬ್ದುಲ್ ರಜಾಕ್ ಅವರ ಪ್ರಕಾರ ಇದು ಅವರ ವ್ಯಾಪಾರದ ಹಣವಾಗಿದ್ದು ಅಧಿಕಾರಿಗಳು ವಿನಾಕಾರಣ ದಾಳಿ [...]

April 30 2013 05:53:06 PM | Posted in ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ಮಾಯಾ ಪರ್ಸ್ ಡಬಲ್ ಚೆಕ್ ಮಾಡಿದ ಅಧಿಕಾರಿಗಳು ! ಸೋನಿಯಾ,ಸುಷ್ಮಾಗೂ ಹೀಗೆಯೇ ಮಾಡಿದ್ರಾ?

maya

ಗುಲ್ಬರ್ಗಾ ( ವಿಶ್ವ ಕನ್ನಡಿಗ ನ್ಯೂಸ್ ) : ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಕುಮಾರಿ ಮಾಯಾವತಿಯವರನ್ನು ಚುನಾವಣಾ ಆಯೋಗದ ಅಧಿಕಾರಿಗಳು ಎರಡು ಬಾರಿ ತಪಾಸಣೆಗೆ ಒಳಪಡಿಸಿದ ಘಟನೆ ಜೇವರ್ಗಿಯಲ್ಲಿ ನಡೆದಿದೆ . ಕರ್ನಾಟಕದಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ಕೈಗೊಂಡಿರುವ ಮಾಯಾವತಿ ಹೆಲಿಕಾಪ್ಟರ್ ಮೂಲಕ ಬಂದಿಳಿಯುತ್ತಿದ್ದಂತೆ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ ಚುನಾವಣಾ ಆಯೋಗದ ಫ್ಲೆಯಿಂಗ್ ಸ್ಕ್ವಾಡ್ ಅಧಿಕಾರಿಗಳು ಅದರಲ್ಲಿದ್ದ ಒಂದು ಲಕ್ಷ ರೂಪಾಯಿ ಮೊತ್ತದ ವಿವರ ಕೇಳಿದರು . [...]

April 29 2013 02:34:07 PM | Posted in Editor Only,ಬೀದರ್,ರಾಜ್ಯ ಸುದ್ದಿಗಳು | Read More »

ಮಂಗಳೂರು : ಕೊಲೆ ಮಾಡಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

knife with blood

ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ನಗರದ ಬೋಳೂರು ನದಿ ದಂಡೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ . ಸುಮಾರು ಮೂವತ್ತೈದು ವರ್ಷ ವಯಸ್ಸಿನ ಈತನಿಗೆ ಹಲ್ಲೆ ನಡೆಸಲಾಗಿದ್ದು ತಲೆಯಲ್ಲಿ ಗಂಭೀರ ಪ್ರಮಾಣದ ಗಾಯದ ಗುರುತುಗಳಿವೆ . ಒಂದು ದಿನದ ಹಿಂದೆ ಯಾರೋ ಈತನನ್ನು ಕೊಲೆ ಮಾಡಿ ನದಿಗೆ ಬಿಸಾಕಿರುವ ಸಾಧ್ಯತೆಗಳಿವೆ . ನಾಗರೀಕರೊಬ್ಬರು ನದಿ ದಂಡೆಯಲ್ಲಿ ಶವ ಕಂಡ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ . ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು [...]

April 29 2013 01:37:46 AM | Posted in Editor Only,ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ಆಫ್ಘಾನಿಸ್ತಾನದಲ್ಲಿ ನ್ಯಾಟೋ ವಿಮಾನ ಪತನ , ನಾಲ್ವರು ಸೈನಿಕರ ಸಾವು

nato

ಕಾಬೂಲ್ ( ವಿಶ್ವ ಕನ್ನಡಿಗ ನ್ಯೂಸ್) : ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ನ್ಯಾಟೋ ವಿಮಾನ ಪತನವಾಗಿ ಅದರಲ್ಲಿದ್ದ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ . ದಕ್ಷಿಣ ಅಫ್ಘಾನಿಸ್ತಾನದಲ್ಲಿ ಈ ದುರ್ಘಟನೆ ನಡೆದಿದ್ದು ನಾಲ್ವರು ಮೃತಪಟ್ಟ ಬಗ್ಗೆ ನ್ಯಾಟೋ ವಕ್ತಾರ ಧೃಡಪಡಿಸಿದ್ದಾರೆ . ನ್ಯಾಟೋ ಹಲವು ದೇಶಗಳ ಸಂಯುಕ್ತ ಸೈನಿಕರನ್ನು ಒಳಗೊಂಡ ಸೇನೆಯಾಗಿದ್ದು ಮೃತ ಪಟ್ಟವರು ಯಾವ ದೇಶದವರು ಎನ್ನುವುದನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ . ಘಟನೆಯ ಬಗ್ಗೆ ನ್ಯಾಟೋ ತನಿಖೆಗೆ ಆದೇಶ ನೀಡಿದ್ದು ತನಿಖೆಯ ನಂತರವೇ [...]

April 28 2013 04:12:45 AM | Posted in Editor Only,ವಿದೇಶ ಸುದ್ದಿಗಳು | Read More »

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಜನಪ್ರಿಯ ಸುದ್ದಿಗಳು

ದಿನವಹಿ ಸುದ್ದಿಗಳು

June 2013
S M T W T F S
« May    
 1
2345678
9101112131415
16171819202122
23242526272829
30  

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************