“ಮಾತಿನಲ್ಲೇ ಮುತ್ತು ಸುರಿಸುವ ಅವಿನಾಶ್ ಕಾಮತ್”
ವಿಶ್ವಕನ್ನಡಿಗ ಪ್ರತಿಭಾ ರಂಗ ಐದನೇ ಸಂಚಿಕೆ – ನಿತಿನ್ ರೈ, ಕುಕ್ಕುವಳ್ಳಿ ಸಾರಥ್ಯ..
ಒಬ್ಬ ವ್ಯಕ್ತಿಗೆ ಮತ್ತೊಂದು ಹೃದಯದಲ್ಲಿ ಮನೆ ಮಾಡಲು ಆ ವ್ಯಕ್ತಿಯ ಮಾತು ಮುತ್ತಿನಂತಿದ್ದರೆ ಹೆಚ್ಚು ಸಮಯ ಬೇಕಾಗಲ್ಲ. ಮಾತಿಗೆ ಅಷ್ಟೊಂದು ಶಕ್ತಿ ಇದೆ. ಹೃದಯ ಕದಿಯೋ ತಾಕತ್ ಇದೆ. ಹಾಗೆ ನಮ್ಮ ಸಂಚಿಕೆಯ ಇಂದಿನ ಪ್ರತಿಭೆ ” ಅದೆಷ್ಟೋ ಹೃದಯಗಳಿಗೆ ಲಗ್ಗೆ ಇಟ್ಟು ಅವರ ಹೃದಯದಲ್ಲಿ ಜಾಗ ಪಡೆದುಕೊಂಡಂತಹ ಅವಿನಾಶ್ ಕಾಮತ್.
ಉಡುಪಿಯ ಟಿ.ಎ.ಪೈ ಇಂಗ್ಲಿಷ್ ಮಾಧ್ಯಮ ಸ್ಕೂಲ್ ನಲ್ಲಿ ಓದಿದ ಅವಿನಾಶ್ ಕನ್ನಡದ ಬಗ್ಗೆ ತನಗಿರುವ ಮಿಡಿತವನ್ನ ಇಂದಿಗೂ ಮುಂದುವರಿಸುತ್ತಾ ಬಂದಿದ್ದಾರೆ. ಮಣಿಪಾಲದ ಎ೦ಐಸಿ ಮಾಸ್ ಕಮುನಿಕೆಶನ್ ಓದಿರುವ ಅವಿನಾಶ್ ಜೀವನ ಹರಸಿದ್ದು “ಮಾತಿನ” ಲೋಕದಲ್ಲಿ. ಮಂಗಳೂರು ಪ್ರವೇಶಿಸಿದ ಅವಿನಾಶ್ ಕೆಲಸ ಗಿಟ್ಟಿಸಿಕೊಂಡದ್ದು ಜನಪ್ರಿಯ ಬಿಗ್ ಎಫ್ ಎಮ್ ನಲ್ಲಿ ರೇಡಿಯೋ ಜಾಕಿಯಾಗಿ. ತನ್ನ ಮಾತಿನ ಮೂಲಕ ನೊಂದ ಮನಸ್ಸುಗಳ ಹೃದಯಕ್ಕೆ ಮುಂಗಾರು ಮಳೆಯನ್ನ ಸುರಿಸಿ ತಂಪು ಮಾಡಿದ ಹುಡುಗನೀತ. “U” ಚಾನೆಲ್ ನಲ್ಲಿ “U ಡಯಲ್ ” ಕಾರ್ಯಕ್ರಮದಲ್ಲಿ 90 ಸಂಚಿಕೆ ನಡೆಸುಕೊಟ್ಟು ಹಾಗೆ “ಲಕ್ಕಿ ಅವರ್ ಗೇಮ್ ಶೋ” ಹಾಗೆ ವಿವಿಧ ಕಾರ್ಯಕ್ರಮಗಳನ್ನ ಜನರ ಮುಂದೆ ತಂದಿದ್ದಾರೆ. ಸಭಾ ಕಾರ್ಯಕ್ರಮದ ನಿರೂಪಕನಾಗಿ ಲೆಕ್ಕಕ್ಕೆ ಸಿಗದಷ್ಟು ಕಾರ್ಯಕ್ರಮಗಳ ಕೇಂದ್ರಬಿಂದುವಾದ ಅವಿನಾಶ್ ದಕ್ಷಿಣಕನ್ನಡ ಹಾಗು ಉಡುಪಿ ಜನರ ಪ್ರೀತಿಯ ಆರ್.ಜೆ ಅವಿನಾಶ್ ಅನ್ನಿಸಿಕೊಂಡಿದ್ದಾರೆ.
ಮಳೆ ಕವಿಯ ಅಪ್ಪಟ ಅಭಿಮಾನಿ – ಅವಿನಾಶ್ ಪ್ರತಿಭೆ ಗರಿಬಿಚ್ಚಿಕೊಂಡದ್ದು ಒಬ್ಬ ಅಭಿಮಾನಿಯಾಗಿ. ತನ್ನದೇ ಆದ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡಿದ್ದ ಅವಿನಾಶ್ ಮತ್ತೊಬ್ಬರ ಅಪ್ಪಟ ಅಭಿಮಾನಿಯಾದದ್ದು ಮಾತ್ರ ವಿಶಿಷ್ಟ. ಅವಿನಾಶ್ ಜಯಂತ್ ಕಾಯ್ಕಿಣಿ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಮೊದಲ ಸ್ಥಾನ ಪಡೆದ ಅಭಿಮಾನಿ ಅಂದರೆ ತಪ್ಪಾಗಲಾರದು. ತನ್ನ ಪ್ರೀತಿಯ ಕವಿಗೆ ಈ ಅಭಿಮಾನಿ ಅರ್ಪಿಸಿದ ಕಾಣಿಕೆ “ಈ ನಯನ ನೂತನ” ಅನ್ನೋ ಪುಸ್ತಕ. ಇದು ಕೇವಲ ಪುಸ್ಥಕವಾಗಿರಲಿಲ್ಲ ಇಲ್ಲಿ ಜಯಂತ್ ಕಾಯ್ಕಿಣಿ ಅವರೇ ಆಶ್ಚರ್ಯ ಪಡುವಂತಹ ಸಂಗತಿಗಳಿದ್ದವು. ತನ್ನ 25 ನೆ ವಯಸ್ಸಿನಲ್ಲಿ ಸಾಹಿತ್ಯ ಲೋಕದಲ್ಲಿ ಹೊಸಮುಖವಾಗಿ ಕಾಣಿಸಿಕೊಂಡ ಅವಿನಾಶ್ ಅವರ ಬರವಣಿಗೆ ನೋಡುವಾಗ ಬರವಣಿಗೆ ಲೋಕಕ್ಕೆ ಹೊಸಬರು ಅನ್ನೋ ಅಂಶವನ್ನ ಮರೆಮಾಚುವಂತಿತ್ತು. ಈ ಪುಸ್ತಕದಲ್ಲಿ ಯೋಗರಾಜ್ ಭಟ್, ರಮೇಶ್, ಮನೋಮೂರ್ತಿ ಮುಂತಾದ ಗಣ್ಯರು ಜಯಂತ್ ಕಾಯ್ಕಿಣಿ ಅವರ ಬಗ್ಗೆ ಬರೆದಿದ್ದಾರೆ. ಮತ್ತೊಂದು ವಿಶೇಷ ಅಂದರೆ ಮುನ್ನುಡಿ ಬರೆದಿರುವವರು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು. ಈ ಪುಸ್ತಕದಲ್ಲಿ ಜಯಂತ್ ಕಾಯ್ಕಿಣಿ ಬರೆದ ಹಾಡುಗಳ ಸೌಂದರ್ಯವಿದೆ. ಹಾಡಿನ ಒಳಗಿನ ಅರ್ಥಗಳಿವೆ. ಯುವ ಪೀಳಿಗೆಯ ಮನಸ್ಸಿಗೆ ಜಯಂತ್ ಅವರು ಹರಿಸಿದ ಹಾಡಿನ ಹನಿಗಳಿವೆ. ಪ್ರಸ್ತುತ ಸ್ಪಂದನ ಟಿವಿ ಯಲ್ಲಿ ನಿರೂಪಕನಾಗಿ ಕೆಲಸನಿರ್ವಹಿಸುತ್ತಿರುವ ಅವಿನಾಶ್, ಯುವ ಹಾಡುಗಾರರ ಹಾಡುಗಳ ಸಂಗಮ ” ಹಾಡು ಕೋಗಿಲೆ” ಹಾಗು “ರಂಗಿನ ದುನಿಯಾ” ಅನ್ನೋ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದಾರೆ. ಬಾಗ್ಯ ಅನ್ನೋ ಕನ್ನಡ ಸಿನಿಮಾದಲ್ಲೂ ನಟಿಸಿರುವ ಅವಿನಾಶ್ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲೂ ತನ್ನ ಯಶಸ್ಸುಗಳಿಸಲಿ ಅನ್ನೋದು ವಿಶ್ವ ಕನ್ನಡಿಗ ತಂಡದ ಹಾರೈಕೆ.












ಮುಂದಿನ ದಿನಗಳಲ್ಲಿ innu ಯಶಸ್ಸುಗಳಿಸಲಿ …
may u hav a bright future….gud luck
congrats Avi…. All the Best….