ದುಬೈಯಲ್ಲಿ ವಿಜೃಂಭಣೆಯಿಂದ ನಡೆದ “ಕರಾವಳಿ ಸಂಗಮ”

ದುಬೈ : ಕರಾವಳಿ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಗುರುವಾರ (26/04/2012) ರಾತ್ರಿ ವಿಜೃಂಭಣೆಯಿಂದ “ಕರಾವಳಿ ಸಂಗಮ” ಕಾರ್ಯಕ್ರಮ ಜರುಗಿತು. ಸಾಮಾಜಿಕ ತಾಣವಾದ ಫೇಸ್ ಬುಕ್ ನಲ್ಲಿ ಪರಿಚಯವಾಗಿ ತಮ್ಮ ಸ್ನೇಹವನ್ನು ಬೆಳೆಸಿ ತಮ್ಮದೇ ಒಂದು ಗ್ರೂಪ್ ಮಾಡಿಕೊಂಡು, ಅದೇ ಇಂದು ಫೇಸ್ ಬುಕ್ ನಲ್ಲಿ ಬಾಣೆತ್ತರಕ್ಕೆ ಬೆಳೆದು ನಿಂತಿರುವ “ಕರಾವಳಿ ಫ್ರೆಂಡ್ಸ್” ಈವರೆಗೆ ಚಾಟ್, ಕಾಮೆಂಟ್ ಮಾಡಿಯೇ ಪರಿಚಯವಿದ್ದ ಕರಾವಳಿ ಫ್ರೆಂಡ್ಸ್ ನಿನ್ನೆ ಮುಖತಃ ಭೇಟಿಯಾಗಿ ಪರಸ್ಪರ ಅಪ್ಪಿಕೊಂಡು ಸಂತೋಷಪಟ್ಟರು.

ಕರಾವಳಿಯ ಖ್ಯಾತ ಗಾಯಕ ನವಾಝ್ ರವರ ಗಾಯನದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ, ಹಲವಾರು ಸಾಂಸ್ಕೃತಿಕ, ಆಟ, ವಿನೋದಗಳೊಂದಿಗೆ ಎಲ್ಲರೂ ಸೇರಿ ಸಂತೋಷಪಟ್ಟರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾದ್ಯವಾದ ಕರಾವಳಿ ಫ್ರೆಂಡ್ಸ್ ಗ್ರೂಪಿನ ಆಡ್‌ಮಿನ್ ಗಳಾದ, ಆಶ್ರಫ್ ಅರಫಾ ಸವಣೂರು, ಮಾಬಿಯ ಕಡಬ, ಉಬೈದ್ ಪಾಣೆಮಂಗಳೂರು, ಅಲ್ತಾಫ್ ಶಾನ್, ಇಸಾಕ್ ಮಠ, ಸಯ್ಯಿದ್ ಶಿಹಾಬ್, ಲತೀಫ್ ಯೂಸುಫ್ ಇವರಿಗೆ ಗೌರವಾರ್ಪಣೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಅನ್ವರ್ ಮುಹಮ್ಮದ್, ಮಸು ಬಂಟ್ವಾಳ, ಸತ್ತಾರ್ ಕುಂತೂರು ಹಾಗೂ ವಿಶೇಷ ಅತಿಥಿ ನವಾಝ್ ಬುಶ್ರಾ ಪಾಲ್ಗೊಂಡು, ಕರಾವಳಿ ಬಗ್ಗೆ ಹಾಡಿ ಹೊಗಳಿದರು. ಕರಾವಳಿ ಫ್ರೆಂಡ್ಸ್ ಸ್ಥಾಪಕ ಅಬ್ದುಲ್ ರಝಾಕ್ (ರಾಝ್) ಬಾಳಾಯರವರು ಅಧ್ಯಕ್ಷೀಯ ಭಾಷಣ ಮಾಡಿದರು. ಸಲಾಮ್ ಸುಹೈಲ್, ರಝ ಸೊರಕೆ ರವರು ಕರಾವಳಿ ಬಗ್ಗೆ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಜಾಪು ಸವಣೂರು, ತೌಸಿ ಉಪ್ಪಿನಂಗಡಿ, ಸಲ್ಲು ಸಲಾಮ್ ತುಂಬೆ, ಸಲೀಂ ಪಡೀಲ್, ಅಬೂಬಕ್ಕರ್ ಸಿದ್ದಿಕ್, ಹಾರಿಸ್ ಕೋಯ್ಲ ರವರು ಭೋಜನದ ವ್ಯವಸ್ಥೆ ಮಾಡಿ ಸಹಕರಿಸಿದರು. [Gallery not found] ಕೊನೆಯಲ್ಲಿ ನಡೆದ ಕರಾವಳಿ ಮೀಟಿಂಗ್‌ನಲ್ಲಿ ಮುಬರುವ ದಿನಗಳಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಅಫ್ತಾಬ್ ಬಸ್ತಿಕ್ಕಾರ್ ಉಪ್ಪಿನಂಗಡಿ ಸ್ವಾಗತಿಸಿ, ಶಾಫಿ ತಾಝ್ ತಿಂಗಳಾಡಿ ಧನ್ಯವಾದ ಸಮರ್ಪಿಸಿದರು. ಉನೈಸ್ ಉಪ್ಪಿನಂಗಡಿ ಕಾರ್ಯಕ್ರಮ ನಿರ್ವಹಿಸಿದರು.

————– ವಿಶ್ವ ಕನ್ನಡಿಗ ನ್ಯೂಸ್ ಈಗ www.vknews.in ನಲ್ಲೂ ಲಭ್ಯ ————–

Posted by on April 28 2012 01:42:42 PM. Filed under ಗಲ್ಫ್ ಸುದ್ದಿಗಳು. You can follow any responses to this entry through the RSS 2.0. Both comments and pings are currently closed.

4 Comments for “ದುಬೈಯಲ್ಲಿ ವಿಜೃಂಭಣೆಯಿಂದ ನಡೆದ “ಕರಾವಳಿ ಸಂಗಮ””

  1. Thanx to VKNEWZ….. Specially to Mr, Hameed CH and Nithin sir….

  2. wooooow good …karavalons rocz …..tnq raaz bai

  3. miss u all ………………..

  4. good work… keep it up

Comments are closed

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಜನಪ್ರಿಯ ಸುದ್ದಿಗಳು

ದಿನವಹಿ ಸುದ್ದಿಗಳು

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************