Home » April 22nd, 2012
Entries posted on “April 22nd, 2012”
ಸಕಲೇಶಪುರ: ಕನ್ನಡ ಆಲ್ಬಂ ಗೀತೆಗಳ ಲೋಕಕ್ಕೆ ಪಟ್ಟಣದ ಭೂಮಿ ಕ್ರಿಯೇಷನ್ಸ್ ಹೊರತರುತ್ತಿರುವ ಒಲವಿನ ಹಾದಿಯಲ್ಲಿ ಪ್ರೇಮ ಪಯಣ ಎಂಬ ಧ್ವನಿಸುರುಳಿ ಬಿಡುಗಡೆಗೆ ಸಿದ್ಧವಾಗಿದೆ. ಸಂಸ್ಥೆಯ ೨ನೇ ಕಾಣಿಕೆಯಾದ ಈ ಧ್ವನಿ ಸುರುಳಿಯಲ್ಲಿ ಒಟ್ಟು ೯ ಹಾಡುಗಳಿದ್ದು, ಆಕಾಶವಾಣಿ ಕಲಾವಿದ ಹಾಗೂ ಪತ್ರಕರ್ತ ಎಚ್.ಡಿ.ಜೈಕುಮಾರ್ ಅವರು ಸಾಹಿತ್ಯ ಬರೆದು ೭ ಹಾಡುಗಳನ್ನೂ ಸಹ ಹಾಡಿದ್ದಾರೆ. ಯುವ ಪೀಳಿಗೆಗೆ ಇಷ್ಟವಾಗುವಂತೆ ಎಲ್ಲಾ ಹಾಡುಗಳು ರಚನೆಯಾಗಿದ್ದು, ಸಾಹಿತ್ಯಕ್ಕೆ ಪುಷ್ಠಿ ನೀಡುವ ಸಂಗೀತ ಅಳವಡಿಸಲಾಗಿದೆ. ಕನ್ನಡ ನಾಡು-ನುಡಿಯನ್ನು ಪ್ರತಿಬಿಂಬಿಸುವ ಗೀತೆಯೊಂದು ಇದರಲ್ಲಿ ಅಡಕವಾಗಿದೆ. [...]
April 22nd, 2012 | Posted in ಹಾಸನ | Read More »
ಒಂದು ಹೆಜ್ಜೆ ಮುಂದೆ ಬನ್ನಿಕಣ್ ತೆರೆದೊಮ್ಮೆ ನೋಡಿ ಉಸಿರಿಗಾಗಿ ಅಲ್ಪ ಜೀವನ ಮಾರಿದವರು ಬೆಳಕಿಗಾಗಿ ಕತ್ತಲನ್ನು ಪಡೆದವರು ಹೊಟ್ಟೆಗಾಗಿ ಮಾನ ಕಳೆದವರು ರೊಟ್ಟಿಗಾಗಿ ಒದೆ ತಿಂದವರು ಮಳೆಯಾದರೆ ಸೋರುವ ಸೂರುಬಿಸಿಲಾದರೆ ನಾರುವ ಬೆವರು ಚಳಿಯಾದರೆ ತಮ್ಮನ್ನೇ ಚುಟ್ಟಿ ಮಲಗುವವರು ಸೆಕೆಯಾದರೆ ತಮ್ಮನ್ನೇ ಬಿಚ್ಚಿ ಮಲಗುವವರು ಅನಾಥರಂಥ ಮಕ್ಕಳು,ಅನಾಥರು ವಿದ್ಯೆವಂಚಿತರು,ಬಾಲಕಾರ್ಮಿಕರು ಜೀವನ ಅವರಿಗೆ ನರಕ ಯಾತನೆ ಯಾತನೆ ಅವರಿಗೆ ನಿತ್ಯೋಪಾಸನೆ ಕನಸು ಕಾಣದ ಕಣ್ ಗಳು ಅರಳು ಪಡೆಯದ ಹೂಗಳು ನಮ್ಮ ಮುಂದೆ ನಮ್ಮ ಊರಲ್ಲಿ ಮನೆ [...]
April 22nd, 2012 | Posted in ಕವನಗಳು | Read More »
ಎಸ್.ಪಿ. ಆದಂ ಪರ್ಲಿಯಾ ಬಂಟ್ವಾಳ : ಶ್ರೀ ಧರ್ಮಶಾಸ್ತ್ರ ವಾಯು ಮಾಲಿನ್ಯ ತಪಾಸಣಾ ಕೇಂದ್ರ, ಬಂಟ್ವಾಳ ಇದರ ಮುಖ್ಯಸ್ಥ ಇಲ್ಲಿನ ಪರ್ಲಿಯಾ ನಿವಾಸಿ ಎಸ್.ಪಿ. ಆದಂ (೬೨) ಅವರು ಎ. ೨೧ ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಾಮರಸ್ಯ-ಸೌಹಾರ್ದತೆಗೆಗೆ ಸದಾ ಶ್ರಮಿಸುತ್ತಿದ್ದ ಆದಂ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದರು. ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪದವಿಪೂರ್ವ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಸಲಹಾ ಮಂಡಳಿಯ ಗೌರವ ಸದಸ್ಯರಾಗಿದ್ದರು. ಬಂಟ್ವಾಳ ತಾಲೂಕು ಆಟೋ ರಿಕ್ಷಾ [...]
April 22nd, 2012 | Posted in ದಕ್ಷಿಣ ಕನ್ನಡ | Read More »
ನವದೆಹಲಿ : ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ತಂಡದ ನಡುವೆ ನಡೆದ ಪಂದ್ಯದ ವೇಳೆ ಡೆಲ್ಲಿ ತಂಡದ ಪರ ಬೆಂಬಲ ವ್ಯಕ್ತಪಡಿಸಿ ತಂಡವನ್ನು ಹುರಿದುಂಬಿಸಿದರು. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯ ವೇಳೆ ಹಾಜರಿದ್ದ ನರ್ಗೀಸ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸಮವಸ್ತ್ರ ಧರಿಸಿ ಗಮನ ಸೆಳೆದರು . ರಣಬೀರ್ ಕಪೂರ್ ಜೊತೆ ನಾಯಕಿಯಾಗಿ ರಾಕ್ ಸ್ಟಾರ್ ಚಿತ್ರದ ಮೂಲಕ ನರ್ಗೀಸ್ ಫಕ್ರಿ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು .
April 22nd, 2012 | Posted in ಚಿತ್ರ ಜಗತ್ತು | Read More »
ಮಂಗಳೂರು : ಇಲ್ಲಿಗೆ ಸಮೀಪದ ಉಳ್ಳಾಲ ಬಂಡಿಕೊಟ್ಯಾ ಎಂಬಲ್ಲಿಂದ ವಿವಾಹಿತೆ ಗೃಹಿಣಿಯೊಬ್ಬಳು ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ . ಇಲ್ಲಿನ ನಿವಾಸಿ ಸತೀಶ್ ಎಂಬುವವರ ಪತ್ನಿ ಮಲ್ಲಿಕಾ ಎಂಬುವವರು ನಾಪತ್ತೆಯಾಗಿರುವವರಾಗಿದ್ದಾರೆ . ಏಪ್ರಿಲ್ ಹದಿನಾಲ್ಕರಂದು ತನ್ನ ತವರು ಮನೆಗೆ ಹೋಗುವುದಾಗಿ ಹೇಳಿ ಹೋದ ಆಕೆ ಅಲ್ಲಿಗೂ ಹೋಗದೆ ಮನೆಗೂ ಬರದೇ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ .
April 22nd, 2012 | Posted in ದಕ್ಷಿಣ ಕನ್ನಡ | Read More »
ದುಬೈ : ಪ್ರತಿ ವರ್ಷ ಎಪ್ರಿಲ್ 22ರಂದು ವರ್ಲ್ಡ್ ಅರ್ಥ್ ಡೇ ಆಗಿ ಆಚರಿಸಲಾಗುತ್ತಿದೆ. ಅರ್ಥ್ ಡೇ ಅನ್ನು ವಿಶ್ವದ್ಯಾಂತ ಎಲ್ಲ ರಾಷ್ಟ್ರಗಳು ಆಚರಿಸಿಕೊಳ್ಳುತ್ತಿದೆ. ಈ ದಿನದಂದು ಭೂಮಿಯ ನೈಸರ್ಗಿಕ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳು ವಿಶ್ವಾದ್ಯಂತ ನಡೆಯುತ್ತದೆ. ಆ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. 1970ರಲ್ಲಿ ಮೊದಲ ಬಾರಿಗೆ ಅಮೆರಿಕದ ಸೆನೆಟರ್ ಆಗಿದ್ದ ನೆಲ್ಸನ್ ಗೆಲಾರ್ಡ್ ಭೂಮಿ ದಿನವನ್ನು ಆಚರಿಸಿದರು. ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ವರ್ಲ್ಡ್ ಅರ್ಥ್ [...]
April 22nd, 2012 | Posted in ವಿದೇಶ ಸುದ್ದಿಗಳು | Read More »
ದಮ್ಮಾಮ್ ( ಸೌದಿ ಅರೇಬಿಯಾ ) ಇಲ್ಲಿನ ದಮ್ಮಾಮ್ – ಅಲ್ ಖೋಬಾರ್ ನಡುವಿನ ರಾಖಾ ಓವರ್ ಬ್ರಿಡ್ಜ್ ಬಳಿ ಸಂಭವಿಸಿದ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದರ್ಬೆ ವಿಟ್ಲದ ಯುವಕ ಮೂವತ್ತೇಳು ವರ್ಷದ ಅಬ್ದುಲ್ ಹಮೀದ್ ದರ್ಬೆ ಎಂಬುವವರು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ . ದರ್ಬೆ ಅಬ್ದುಲ್ ಖಾದರ್ ಎಂಬುವವರ ಪುತ್ರನಾಗಿರುವ ಇವರು ಸೌದಿ ಎಲೆಕ್ಟ್ರಿಕ್ ಕಂಪೆನಿಯ ಗುತ್ತಿಗೆ ಪಡೆದಿರುವ ಯಾಹ್ಯಾ ಅಲ್ ನಸೀಬ್ ಎಂಬ ಕಂಟ್ರಾಕ್ಟ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು . ಹೈವೇ ಬದಿಯಲ್ಲಿ ಇವರು ವಿದ್ಯುತ್ [...]
April 22nd, 2012 | Posted in ಗಲ್ಫ್ ಸುದ್ದಿಗಳು | Read More »
ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಅವರ ಮುಖಕ್ಕೆ ಕಿಡಿಗೇಡಿಯೊಬ್ಬ ನಗರದ ಪಂಪ್‌ವೆಲ್ ಬಳಿ ಸೆಗಣಿ ಬಳಿದು ಪರಾರಿಯಾಗಿದ್ದಾನೆ. ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ತನಿಖಾ ದಳದ ಮುಖ್ಯಸ್ಥರಾಗಿರುವ ಸೋಮಯಾಜಿ ಅವರು ನಗರದ ಆಸುಪಾಸಿನ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ ಮಧ್ಯಾಹ್ನ ಊಟಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಘಟನೆ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಸೋಮಯಾಜಿ, `ಪರೀಕ್ಷಾ ಕರ್ತವ್ಯದಲ್ಲಿದ್ದ ನಾನು ನಾಲ್ವರು ಸಹೋದ್ಯೋಗಿಗಳ ಜತೆ ಪಂಪ್‌ವೆಲ್‌ನ ಪದ್ಮಶ್ರೀ ಹೋಟೆಲ್‌ನಲ್ಲಿ ಊಟ ಮಾಡಿದ್ದೆ. ಸಹೋದ್ಯೋಗಿಯೊಬ್ಬರು ಊಟ ಮುಗಿಸಿರದ [...]
April 22nd, 2012 | Posted in ದಕ್ಷಿಣ ಕನ್ನಡ | Read More »
ಮೈಸೂರು : ಸಕಲೇಶಪುರದ ಹೆನ್ನಲಿ ಎಸ್ಟೇಟ್‌ನ ಎಸ್. ಅಸ್ಲಾಂ ಹಾಗೂ ನಇಮಾ ಅಸ್ಲಾಂ ಅವರ ಪುತ್ರಿ ಸೋಬಿಯಾ ಅಮೀನ್ ಅವರು 2011ರ ಮೇ ಹಾಗೂ ಜೂನ್ ನಲ್ಲಿ ನಡೆದ ಎಂ.ಎಸ್.ಸಿ (ಮಾನವ ಅಭಿವೃದ್ಧಿ) ಪರೀಕ್ಷೆಯ್ಲಲಿ ಅತಿ ಹೆಚ್ಚು ಅಂಕಗಳನ್ನು ಗಳಿಸ್ದಿದು, ಮೈಸೂರು ವಿಶ್ವವಿಧ್ಯಾನಿಲಯದ 92ನೇ ಘಟಿಕೋತ್ಸವದ್ಲಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಪ್ರಶಸ್ತಿ ಪ್ರಧಾನ ಮಾಡಿದರು. – ಅಕ್ಬರ್ ಜುನೈದ್, ಸಕಲೇಶಪುರ. (ವರದಿಗಾರರು, ವಿಕೆ ನ್ಯೂಸ್)
April 22nd, 2012 | Posted in ಹಾಸನ | Read More »
ಕುಂದಾಪುರ : ತನ್ನ ಅಕ್ಕನ ಬಗ್ಗೆ ಅವ್ಯಾಚವಾಗಿ ಬೈದು ನಿಂದಿಸಿದ್ದಕ್ಕೆ ಉದ್ರಿಕ್ತಗೊಂಡ ಸ್ನೇಹಿತ ಇನ್ನೋಬ್ಬ ವ್ಯಕ್ತಿಯೊಂದಿಗೆ ಸೇರಿಕೊಂಡು ತನ್ನ ಸ್ನೇಹಿತನನ್ನೇ ಚಾಕುವಿನಿಂದ ಇರಿದ ಘಟನೆ ಕುಂದಾಪುರದ ಸಂಗಮ್ ಬಳಿ ಶುಕ್ರವಾರ ತಡರಾತ್ರಿ (ಸುಮಾರು 12.30)ರ ಸುಮಾರಿಗೆ ನಡೆದಿದೆ. ರಾತ್ರಿ ಕುಡಿತದ ನಂತರ ಬೈಕ್ ಹತ್ತಿ ಮನೆಗೆ ಹೋಗುವ ಸಂದರ್ಭ ಬೈಕ್ ತಡೆದು ನಿಲ್ಲಿಸಿದ ಆರೋಪಿಗಳು ಒಂದೇ ಸಮನೆ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾರೆ, ಇದರಿಂದ ತೀವ್ರವಾಗಿ ಗಾಯಗೋಂಡ ಗಾಯಾಳುವನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ [...]
April 22nd, 2012 | Posted in ಉಡುಪಿ | Read More »