Home » April 16th, 2012
Entries posted on “April 16th, 2012”
ಬಂಟ್ವಾಳ : ತಾಲೂಕಿನ ತುಂಬೆ-ರಾಮಲ್‌ಕಟ್ಟೆ ನಡುವಿನ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಕಾರ್ಮಿಕರೊಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮೃತರನ್ನು ಅಸ್ಸಾಂ ನಿವಾಸಿ ರಿಟ್ಟು ಪ್ರೊತಿಂ ಸೋನುವಾಲ್ (24) ಎಂದು ಗುರುತಿಸಲಾಗಿದ್ದು, ಈತ ತುಂಬೆ ಮರದ ಮಿಲ್‌ವೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎಂದು ತಿಳಿದು ಬಂದಿದೆ. – ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
April 16th, 2012 | Posted in ದಕ್ಷಿಣ ಕನ್ನಡ | Read More »
ನವದೆಹಲಿ : ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದು ತವರಿಗೆ ಮರಳಿರುವ ಭಾರತ ತಂಡದ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ ಅವರನ್ನು ಹರ್ಭಜನ್ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿದರು . ಈ ವಿಷಯವನ್ನು ಹರ್ಭಜನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಜೊತೆಗೆ ಯುವಿ ಜೊತೆಗಿರುವ ಫೋಟೋವನ್ನು ಹಾಕಿದ್ದಾರೆ . ಯುವಿ ಅತ್ಯಂತ ಉತ್ಸಾಹದಲ್ಲಿದ್ದು ಅತೀ ಬೇಗ ಕ್ರಿಕೆಟ್ ಆಟಕ್ಕೆ ಮರಳಿದ್ದಾರೆ ಎಂದು ಭಜ್ಜಿ ಬರೆದುಕೊಂಡಿದ್ದಾರೆ . ಅಮೆರಿಕಾದಿಂದ ಚಿಕಿತ್ಸೆ ಪಡೆದು ವಾಪಾಸ್ಸಾದ ಯುವಿ ಅವರನ್ನು ಐಸಿಸಿ ಅಧ್ಯಕ್ಷ ಶರದ್ [...]
April 16th, 2012 | Posted in ಕ್ರೀಡಾ ಸುದ್ದಿಗಳು | Read More »
ಬೆಂಗಳೂರು : ಬೆಂಗಳೂರಿನಿಂದ ಮಲೇಷಿಯಾದ ರಾಜಧಾನಿ ಕೌಲಲಾಂಪುರಕ್ಕೆ ಹೊರಟಿದ್ದ ಮಲೇಷಿಯನ್ ಏರ್ಲೈನ್ಸ್ ವಿಮಾನ ತಾಂತ್ರಿಕ ತೊಂದರೆಗಳ ಕಾರಣ ಒಂದು ಗಂಟೆ ಮೂವತ್ತು ನಿಮಿಷಗಳ ಹಾರಾಟದ ನಂತರ ವಾಪಾಸ್ಸು ಬೆಂಗಳೂರು ವಿಮಾನ ನಿಲ್ಧಾಣಕ್ಕೆ ಬಂದಿಳಿದ ಘಟನೆ ನಿನ್ನೆ ನಡೆದಿದೆ . ನೂರ ಐವತ್ತೊಂದು ಪ್ರಯಾಣಿಕರಿದ್ದ ಈ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಈ ಸಂದರ್ಭದಲ್ಲಿ ಯಾವುದೇ ಅಪಾಯವಾಗಿಲ್ಲ.
April 16th, 2012 | Posted in ರಾಜ್ಯ ಸುದ್ದಿಗಳು | Read More »
ಹೈದರಾಬಾದ್ : ಆಹಾರದ ಕೇಸರೀಕರಣ ವಿರೋಧಿಸಿ ಇಲ್ಲಿನ ಉಸ್ಮಾನಿಯಾ ವಿವಿಯ ಕೆಲ ವಿದ್ಯಾರ್ಥಿ ಸಂಘಟನೆಗಳು ಏರ್ಪಡಿಸಿದ್ದ ಬೀಫ್ ಉತ್ಸವದಲ್ಲಿ ಪಾಲ್ಗೊಂಡ ಐವರು ವಿದ್ಯಾರ್ಥಿಗಳ ಮೇಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ಹಾಸ್ಟೆಲ್ ನಲ್ಲಿ ಆಹಾರದ ಹಕ್ಕನ್ನು ನಿರಾಕರಿಸುವ ಕ್ರಮದ ಕುರಿತು ತೆಲಂಗಾಣ ಸ್ಟೂಡೆಂಟ್ ಅಸೋಸಿಯೇಶನ್ , ಪ್ರೋಗ್ರೆಸಿವ್ ಡೆಮೊಕ್ರಾಟಿಕ್ ಸ್ಟೂಡೆಂಟ್ ಯೂನಿಯನ್ , ಎಸ್.ಎಫ್.ಐ ಸಹಿತ ಹಲವು ದಲಿತ ಮತ್ತು ಎಡ ಪಕ್ಷಗಳ ಬೆಂಬಲಿತ ಸಂಘಟನೆಗಳು ಬೀಫ್ ಉತ್ಸವ ಹಮ್ಮಿಕೊಂಡಿದ್ದವು. ಈ ಉತ್ಸವದಲ್ಲಿ ಹಲವು ಉಪನ್ಯಾಸಕರು ಮತ್ತು ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಬೀಫ್ ನಿಂದ ತಯಾರಿಸಿದ ವಿವಿಧ ರೀತಿಯ [...]
April 16th, 2012 | Posted in ರಾಷ್ಟ್ರೀಯ ಸುದ್ದಿಗಳು | Read More »
ನವದೆಹಲಿ : ಉಗ್ರವಾದ, ಧಾರ್ಮಿಕ ಮೂಲಭೂತವಾದಿತ್ವ ಮತ್ತು ಜನಾಂಗೀಯ ಹಿಂಸಾಚಾರಗಳು ಇಂದು ದೇಶ ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆಗಳಾಗಿದ್ದು ಅವುಗಳ ವಿರುದ್ಧ ಹೋರಾಡಲು ಕೇಂದ್ರದೊಂದಿಗೆ ಎಲ್ಲಾ ರಾಜ್ಯಗಳು ಕೈಜೋಡಿಸಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಹೇಳಿದರು. ಆಂತರಿಕ ಭದ್ರತೆ ಕುರಿತು ಚರ್ಚಿಸಲು ಕರೆದಿದ್ದ ಮುಖ್ಯಮಂತ್ರಿಗಳ ಸಭೆ ಉಧ್ಘಾಟಿಸಿ ಮಾತನಾಡಿದ ಪ್ರಧಾನಿ ಮುಖ್ಯವಾಗಿ ಎಡಪಂಥಿಯ ಉಗ್ರವಾದಿತ್ವ, ಧಾರ್ಮಿಕ ಮೂಲಭೂತವಾದಿತ್ವ ಮತ್ತು ಜನಾಂಗೀಯ ಹಿಂಸಾಚಾರಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲುಗಳು ಎದುರಾಗುತ್ತಿದ್ದು ಈ ನಿಟ್ಟಿನಲ್ಲಿ ಅವುಗಳ [...]
April 16th, 2012 | Posted in ರಾಷ್ಟ್ರೀಯ ಸುದ್ದಿಗಳು | Read More »
ಹತ್ತು ವರುಷದ ಹಿಂದೆ ಭಾರತದಲ್ಲಿ ಸಂಸತ್ ಮೇಲೆ ನಡೆದಂತಹ ಹಾಗು ಮುಂಬೈನಲ್ಲಿ ನಡೆದಂತಹ ದಾಳಿಯ ರೀತಿಯಲ್ಲೇ ನಿನ್ನೆ ಅಫ್ಘಾನ್ ಸಂಸತ್ತಿನ ಮೇಲೆ ತಾಲಿಬಾನ್ ಉಗ್ರರು ಗುಂಡಿನ ದಾಳಿಯನ್ನ ನಡೆಸಿದ್ದಾರೆ. ಆಫ್ಘಾನಿಸ್ಥಾನದ ಸುಮಾರು 12 ಕಡೆ ಬಾಂಬ್ ದಾಳಿ ನಡೆದಿದ್ದು ಅಮೆರಿಕ, ಇಂಗ್ಲೆಂಡ್ ರಾಯಭಾರಿ ಕಚೇರಿಯನ್ನು ಟಾರ್ಗೆಟ್ ಮಾಡಿ ಈ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ಜಲಾಲ್ ಬಾದ್ ಏರ್ ಪೋರ್ಟ್, ಸಂಸತ್ ಮೇಲೂ ದಾಳಿ ನಡೆಸಿದ ಉಗ್ರರು ಪಂಚತಾರ ಹೋಟೆಲ್ ಮೇಲೂ ಗ್ರೆನೇಡ್ ದಾಳಿ ನಡೆಸಿದರು. ಈ [...]
April 16th, 2012 | Posted in ವಿದೇಶ ಸುದ್ದಿಗಳು | Read More »
ಅಂಕ ಪಟ್ಟಿ ಬ್ಯಾಟಿಂಗ್ ಅಗ್ರಶ್ರೇಣಿ ಬೌಲಿಂಗ್ ಅಗ್ರಶ್ರೇಣಿ
April 16th, 2012 | Posted in ಕ್ರೀಡಾ ಸುದ್ದಿಗಳು | Read More »
ಮಾಸ್ಕೋ : ಭಾರತದ ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದ ಘಟನೆಯನ್ನು ಅಮೆರಿಕವು ಗಂಭೀರವಾಗಿ ಪರಿಗಣಿಸಬೇಕು. ಇದು ಮರುಕಳಿಸದಂತೆ ನೋಡಿಕೊಳ್ಳಬೇಕು. ಕಾಟಾಚಾರದ ಕ್ಷಮಾಪಣೆಯಿಂದ ಪ್ರಯೋಜನವಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಶಾರುಕ್ ಪ್ರಕರಣದಲ್ಲಿ ಭಾರತಕ್ಕೆ ಅಸಮಾಧಾನವಾಗಿದೆ ಎನ್ನುವುದನ್ನು ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಉಪಮುಖ್ಯಸ್ಥರ ಗಮನಕ್ಕೆ ತರಲು ವಿದೇಶಾಂಗ ಕಾರ್ಯದರ್ಶಿ ಕಚೇರಿಗೆ ಸೂಚನೆ ನೀಡಿದ್ದಾಗಿಯೂ ಕೃಷ್ಣ ಹೇಳಿದ್ದಾರೆ. ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಈ ಘಟನೆಗಾಗಿ [...]
April 16th, 2012 | Posted in ರಾಷ್ಟ್ರೀಯ ಸುದ್ದಿಗಳು,ವಿದೇಶ ಸುದ್ದಿಗಳು | Read More »
ಬೆಂಗಳೂರು : ಗುಲ್ಬರ್ಗ, ರಾಯಚೂರು ಸೇರಿದಂತೆ ನೆರೆಹೊರೆಯ ಒಟ್ಟು ನಾಲ್ಕು ಜಿಲ್ಲೆಗಳ ದಲಿತರ ಕೇರಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು. ಅವರು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೌಚಾಲಯ ನಿರ್ಮಾಣ ಕಾರ್ಯವನ್ನು ಹಂತ ಹಂತವಾಗಿ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರತಿಯೊಂದು ಶೌಚಾಲಯ ನಿರ್ಮಾಣಕ್ಕೆ ಪ್ರಸ್ತುತ 3,250 ರೂಪಾಯಿ ನೀಡಲಾಗುತ್ತಿದೆ. ಇನ್ನುಳಿದ [...]
April 16th, 2012 | Posted in ರಾಜ್ಯ ಸುದ್ದಿಗಳು | Read More »
ಬೆಂಗಳೂರು: ವಿವಾಹದ ಆರಂಭದ ದಿನಗಳಿಂದಲೇ ಏನೇನೋ ಸಬೂಬು ಹೇಳಿ ಸಂತೃಪ್ತ ಲೈಂಗಿಕ ಜೀವನ ನಡೆಸಲು ಸಂಗಾತಿ ನಿರಾಕರಿಸಿದರೆ ಅದು `ಕ್ರೌರ್ಯ` ಎಂದಿರುವ ಹೈಕೋರ್ಟ್, ವಿಚ್ಛೇದನಕ್ಕೆ ಇದೂ ಒಂದು ಕಾರಣ ಆಗಬಹುದು ಎಂದು ಮಹತ್ವದ ತೀರ್ಪು ನೀಡಿದೆ. ಪತ್ನಿ ನೀಡುತ್ತಿರುವ ಸಬೂಬುಗಳಿಂದ ಬೇಸತ್ತ ಪತಿಯೊಬ್ಬರು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಅದು `ಕ್ರೌರ್ಯ` ಅಲ್ಲ ಎಂದಿದ್ದ ಕೌಟುಂಬಿಕ ಕೋರ್ಟ್ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತರಾದ ಪತ್ನಿಯ ವಿರುದ್ಧ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕಕೋರ್ಟ್ [...]
April 16th, 2012 | Posted in ರಾಜ್ಯ ಸುದ್ದಿಗಳು | Read More »