Home » April 13th, 2012 Entries posted on “April 13th, 2012”

ಪುತ್ತೂರು : ಜೀವನ್ ಭಂಡಾರಿ ಇನ್ನಿಲ್ಲ

ಪುತ್ತೂರು : ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅದ್ಯಕ್ಷ, ಎಸ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ, ಕಾಂಗ್ರೆಸ್ ನಾಯಕ ಜೀವನ್ ಭಂಡಾರಿ ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯಕೃತ್ತು ಸಬಂಧಿ ಕಾಯಿಲೆಯಿಂದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರಗೆ ದಾಖಲು ಮಾಡಲಾಗಿತ್ತು.

April 13th, 2012 | Posted in ದಕ್ಷಿಣ ಕನ್ನಡ | Read More »

ಕುರುಬ ಸಮಾಜದ ವ್ಯಕ್ತಿಗೆ ಸಿಎಂ ಹುದ್ದೆ ಘೋಷಿಸುವ ರಾಜಕೀಯ ಪಕ್ಷಕ್ಕೆ ಸಮಾಜದ ಬೆಂಬಲ – ಕರ್ನಾಟಕ ಪ್ರದೇಶ ಕುರುಬರ ಸಂಘ ಘೋಷಣೆ

ಹಾವೇರಿ: ರಾಜ್ಯದಲ್ಲಿ ೬೦-೬೫ ಲಕ್ಷ ಜನಸಂಖ್ಯೆ ಹೊಂದಿರುವ ಕುರುಬ ಸಮಾಜವು ರಾಜ್ಯದ ಜನಸಂಖ್ಯೆಯಲ್ಲಿ ಮೂರನೇ ಸ್ಥಾನ ಹೊಂದಿದ್ದು ನಮ್ಮ ಸಮಾಜದ ಮತ ಪಡೆಯುವ ರಾಜಕೀಯ ಪಕ್ಷಗಳು ನಮ್ಮನ್ನು ಅಧಿಕಾರ ನೀಡುವ ಸಂದರ್ಭದಲ್ಲಿ ಕಡೆಗಣಿಸುತ್ತಾ ಬಂದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುರುಬ ಸಮಾಜದ ವ್ಯಕ್ತಿಗೆ ಸಿಎಂ ಹುದ್ದೆ ಘೋಷಿಸುವ ರಾಜಕೀಯ ಪಕ್ಷಕ್ಕೆ ಸಮಸ್ಥ ಸಮಾಜದ ಬೆಂಬಲ ನೀಡುವುದಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಶಾಂತಪ್ಪ ಕಾರ್ಯದರ್ಶಿ ರಾಮಚಂದ್ರಪ್ಪ ಘೋಷಿಸಿದರು. ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿದ [...]

April 13th, 2012 | Posted in ಹಾವೇರಿ | Read More »

ಹಾಲುಮತ ಮಹಾಸಭಾ ಶತಮಾನೋತ್ಸವ 2012 – ಮೇ.6.ರಂದು ದಾವಣಗೇರಿಯಲ್ಲಿ ಕುರುಬರ ಜಾಗೃತಿ ಸಮಾವೇಶ : 5 ಲಕ್ಷ ಜನ ಸೇರುವ ನಿರೀಕ್ಷೆ

ಹಾವೇರಿ: ಶ್ರೀ ಹಾಲುಮತ ಮಹಾಸಮ್ಮೇಳನವು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲಿ ೧೯೧೦ ರಲ್ಲಿ ನಡೆದಿತ್ತು. ಹಾಲುಮತ ಮಹಾಸಭಾ ಶತಮಾನೋತ್ಸವದ ಅಂಗವಾಗಿ ಮೇ.೬.ರಂದು ಡಾವಣಗೇರಿಯಲ್ಲಿ ಕುರುಬ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶದಲ್ಲಿ ೫ ಲಕ್ಷ ಜನ ಸಮಾಜ ಬಾಂಧವರು ಜೊತೆಗೆ ಇತರೆ ಹಿಂದುಳಿದ ವರ್ಗದ ಜನ ಪಾಲ್ಗೊಳ್ಳುವರೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಶಾಂತಪ್ಪ ಕಾರ್ಯದರ್ಶಿ ರಾಮಚಂದ್ರಪ್ಪ ಹೇಳಿದರು. ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಕುರುಬ ಸಮಾಜದವರು ರಾಜ್ಯದ ೩ನೇ ಅತೀ ದೊಡ್ಡ ಜನಸಂಖ್ಯೆಯಲ್ಲಿದ್ದು, [...]

April 13th, 2012 | Posted in ಹಾವೇರಿ | Read More »

ಹರಳೂರು ವೀರಭದ್ರಸ್ವಾಮಿಯ ವೈಭವದ ರಥೋತ್ಸವ

ತುಮಕೂರು ತಾಲ್ಲೂಕು ಹರಳೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿಯ ವೈಭವದ ರಥೋತ್ಸವವು ಏಪ್ರಿಲ್ 12 ರಂದು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಗಳಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ರಥಾಂಗಹೋಮ, ರಥಪ್ರತಿಷ್ಠೆ, ಧೂಳೋತ್ಸವ, ಪುಷ್ಪಾಲಂಕಾರ, ಸಿಂಹವಾಹನೋತ್ಸವ ಸೇರಿದಂತೆ ಹಲವಾರು ಧಾರ್ಮಿಕ ಪೂಜಾದಿಗಳು ನಡೆದವು. ತುಮಕೂರು ಸೇರಿದಂತೆ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಈ ಸಂಭ್ರಮದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ವಸತಿ ಸಚಿವ ವಿ. ಸೋಮಣ್ಣ, ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ, ಬೆಂಗಳೂರಿನ ದಾನಿ ನಾರಾಯಣಸ್ವಾಮಿ ರೆಡ್ಡಿ, [...]

April 13th, 2012 | Posted in ತುಮಕೂರು | Read More »

ಬಂಟ್ವಾಳ : ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕರೆತಂದ ಪೊಲೀಸ್ ಸಿಬ್ಬಂದಿ

ಬಂಟ್ವಾಳ : ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನನ್ನು ಪೊಲೀಸ್ ಪೇದೆಯೊಬ್ಬ ಪತ್ತೆ ಹಚ್ಚಿ ಕರೆ ತಂದಿರುವ ಘಟನೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಮೂಲತಃ ಗದಗ ನಿವಾಸಿಯಾಗಿದ್ದ ಬಸವರಾಜ್ ಎಂಬಾತ ಫರಂಗಿಪೇಟೆ ಸಮೀಪದ ಅರ್ಕುಳ ಎಂಬಲ್ಲಿ ವ್ಯಕ್ತಿಯೊಬ್ಬರ ಕೃಷಿ ಜಮೀನಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ. ಈತ ಕಳೆದ ೨೦೦೯ ರಲ್ಲಿ ಫರಂಗಿಪೇಟೆಗೆ ಹೋಗಿ ಬರುವುದಾಗಿ ಹೇಳಿ ಅರ್ಕುಳದಿಂದ ತೆರಳಿದ ಬಳಿಕ ವಾಪಾಸು ಬಂದಿರಲಿಲ್ಲ. ಈ ಕುರಿತು ತೋಟದ ಮಾಲಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ [...]

April 13th, 2012 | Posted in ದಕ್ಷಿಣ ಕನ್ನಡ | Read More »

ಕಲ್ಲಡ್ಕ : ರಿಕ್ಷಾ ರಸ್ತೆಗೆ ಉರುಳಿ ಬಿದ್ದು ಚಾಲಕನಿಗೆ ಗಾಯ

ಬಂಟ್ವಾಳ : ತಾಲ್ಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ರಿಕ್ಷಾವೊಂದು ರಸ್ತೆಯಲ್ಲೇ ಉರುಳಿ ಬಿದ್ದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಗಾಯಗೊಂಡವರನ್ನು ಬಂಟ್ವಾಳ ನಿವಾಸಿ ನಾಸಿರ್ (31) ಎಂದು ಹೆಸರಿಸಲಾಗಿದೆ. ಮಾಣಿ ಕಡೆಯಿಂದ ಕಲ್ಲಡ್ಕ ಕಡೆಗೆ ನಾಸಿರ್ ರಿಕ್ಷಾ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಅಪಘಾತದಿಂದ ಕಾಲಿಗೆ ಭಾಗಕ್ಕೆ ಗಂಭೀರ ಗಾಯ ಮಾಡಿಕೊಂಡ ನಾಸಿರ್‌ನನ್ನು ತಕ್ಷಣ [...]

April 13th, 2012 | Posted in ದಕ್ಷಿಣ ಕನ್ನಡ | Read More »

ಹಿಂದೂಸ್ತಾನಿ ಮುಸಲ್ಮಾನರೇ ಎರಡನೇ ಮದುವೆಯಿಂದ ದೂರವಿರಿ

ದೇವ್ ಬಂದ್ ( ಉತ್ತರ ಪ್ರದೇಶ ) : ಭಾರತೀಯ ಮುಸಲ್ಮಾನರು ಎರಡನೇ ವಿವಾಹದಿಂದ ದೂರವಿರಿ ಎಂದು ಮುಸ್ಲಿಮರ ಖ್ಯಾತ ಧಾರ್ಮಿಕ ಸಂಸ್ಥೆ ದಾರುಲ್ ಉಲೇಮಾ ದೇವ್ ಬಂದ್ ಕರೆ ನೀಡಿದೆ. ಎರಡು ವಿವಾಹವಾಗುವ ಪುರುಷರು ಎರಡೂ ಪತ್ನಿಯರನ್ನು ಸರಿ ಸಮಾನವಾಗಿ  ನೋಡಿಕೊಳ್ಳಬೇಕು ಎಂಬ ನಿಯಮ ಇಸ್ಲಾಮಿನದ್ದಾಗಿದೆ . ಆದರೆ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರನ್ನೂ ಸರಿ ಸಮಾನವಾಗಿ ನೋಡಿಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಒಂದು ಪತ್ನಿ ಜೀವಂತವಾಗಿರುವಾಗಲೇ ಇನ್ನೊಂದು ವಿವಾಹವಾಗುವ ನಿರ್ಧಾರ ಮಾಡಬೇಡಿ ಎಂದು ಭಾರತದ ಮುಸ್ಲಿಮರ [...]

April 13th, 2012 | Posted in ರಾಷ್ಟ್ರೀಯ ಸುದ್ದಿಗಳು | Read More »

ಬಂಟ್ವಾಳ : ಎ. 15 ರಂದು ಉಚಿತ ವೈದ್ಯಕೀಯ ಶಿಬಿರ

ಬಂಟ್ವಾಳ : ಬದ್ರಿಯಾ ಯಂಗ್‌ಮೆನ್ಸ್ ಬಾರೆಕಾಡ್-ಬಂಟ್ವಾಳ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ಬಂಟ್ವಾಳ ಇವುಗಳ ಜಂಟಿ ಆಶ್ರಯದಲ್ಲಿ ತುಂಬೆ ಬಿ.ಎ. ಆಸ್ಪತ್ರೆಯ ಸಹಯೋಗದೊಂದಿಗೆ ‘ಉತ್ತಮ ನಾಡಿಗಾಗಿ, ಉತ್ತಮ ನಾಳೆಗಾಗಿ’ ಎಂಬ ಧ್ಯೇಯ ವಾಕ್ಯದಡಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಎ. 15 ರಂದು ಭಾನುವಾರ ಪೂರ್ವಾಹ್ನ 10 ರಿಂದ ಅಪರಾಹ್ನ 1 ರತನಕ ಬಾರೆಕಾಡ್ ಕ್ರೀಡಾ ಮೈದಾನದಲ್ಲಿ ನಡೆಯಲಿದೆ. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸ್ಥಾನೀಯ ಅಧ್ಯಕ್ಷ ಸಈದ್ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ [...]

April 13th, 2012 | Posted in ದಕ್ಷಿಣ ಕನ್ನಡ | Read More »

ಮಂಗಳೂರು : ಪತ್ರಕರ್ತನ ಮೇಲಿನ ಹಲ್ಲೆಗೆ ಪಿ.ಎಫ್.ಐ ಖಂಡನೆ

ಮಂಗಳೂರು : ಪತ್ರಿಕಾ ಗೋಷ್ಠಿ ನಡೆಯುತ್ತಿರುವ ಸಂದರ್ಭದಲ್ಲಿ ಜಯಕಿರಣ ಪತ್ರಿಕೆಯ ಪತ್ರಕರ್ತನ ಮೇಲೆ ನಡೆಸಿದ ಹಲ್ಲೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ . ಪತ್ರಕರ್ತನೋರ್ವನ ಮೇಲಿನ ಹಲ್ಲೆಯು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ವಿಫಲ ಯತ್ನವಾಗಿದೆ. ಈ ರೀತಿಯ ಯತ್ನವು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಸೌಜನ್ಯದಿಂದ ಮಾತನಾಡಬೇಕಿದ್ದ ವೈದ್ಯಾಧಿಕಾರಿಯ ಈ ರೀತಿಯ ಹಿಂಸಾತ್ಮಕ ಪ್ರವೃತ್ತಿಯು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತದೆ. ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ [...]

April 13th, 2012 | Posted in ದಕ್ಷಿಣ ಕನ್ನಡ | Read More »

ಸಕಲೇಶಪುರ : ಜೆಡಿಎಸ್ ಬೈಕ್ ರ‍್ಯಾಲಿ

ಸಕಲೇಶಪುರ :  ಸಕಲೇಶಪುರ ತಾಲ್ಲೂಕಿನಿಂದ  ಜೆಡಿಎಸ್‌ ಯುವ ಸಮಾವೇಶಕ್ಕೆನೂರಾರು ಪಕ್ಷದ ಕಾರ್ಯಕರ್ತರು ಗುರುವಾರ ಬೈಕ್ ರ‍್ಯಾಲಿ ಮೂಲಕ ಹಾಸಕ್ಕೆ ತೆರಳಿದರು. ರ‍್ಯಾಲಿಯನ್ನು ಪಕ್ಷದ ತಾಲೂಕು ಅಧ್ಯಕ್ಷ  ದೊಡ್ಡದೀಣೆ ಸ್ವಾಮಿ ಧ್ವಜ ತೋರಿಸುವ ಮೂಲಕ ಚಾಲಣೆ ನೀಡಿದರು. ಈ ಸಂಧರ್ಭದಲ್ಲಿ ಶಾಸಕ ಎಚ್‌ಕೆ ಕುಮಾರ ಸ್ವಾಮಿ, ಜಿಪಂ ಸದಸ್ಯ ಬೈರಮುಡಿ ಚಂದ್ರು, ಪುರಸಭ ಅಧ್ಯಕ್ಷ ಎಚ್ ಎ ಭಾಸ್ಕರ್ ಉಪಸ್ಥಿತರಿದ್ದರು  

April 13th, 2012 | Posted in ಹಾಸನ | Read More »

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ಶುಭಹಾರೈಕೆ….

ಶುಭಹಾರೈಕೆ….

ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ವರದಿಗಾರರಾದ ನಿತಿನ್ ರೈ ಕುಕ್ಕುವಳ್ಳಿ ಅವರ ದ್ವಿತೀಯ ವಿವಾಹ ವಾರ್ಷಿಕಕ್ಕೆ ಶುಭ ಹಾರೈಸುವ .....

ಸಂಪಾದಕೀಯ ಮಂಡಳಿ,
ವಿಶ್ವಕನ್ನಡಿಗ ನ್ಯೂಸ್.

***********************************************************

ದಿನವಹಿ ಸುದ್ದಿಗಳು

Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************