ಸಕಲೇಶಪುರ: ಬೆಳ್ಳೂರು ಮತ್ತು ಶೆಟ್ಟಿಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಸಕಲೇಶಪುರ: ತಾಲೂಕು ಅಡಳಿತದ ಕುಮ್ಮಕ್ಕಿನಿಂದ ಪಟ್ಟಬದ್ರ ಹಿತಾಸಕ್ತಿಗಳು ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದಾರೆಂದು ತಾಲೂಕಿನ ಬೆಳ್ಳೂರು ಮತ್ತು ಶೆಟ್ಟಿಹಳ್ಳಿ ಗ್ರಾಮಸ್ಥರು ಪಟ್ಟದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ತಾಲ್ಲೂಕು ಕಛೇರಿ ಎದರು ಕೆಲಕಾಲ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿ, ಉಪವಿಭಾಗದಿಕಾರಿ ಕಛೇರಿ ಎದರು ಧರಣಿವಡೆಸಿದರು.
ಮಕ್ಕಳು ಶಾಲೆಗೆ ಹೋಗಲು ಭಯ ಪಡುವಂತಹ ಪರಿಸ್ಥಿತಿ ಉಂಟಾಗಿದೆ. ದನಕರುಗಳು ತಿರುಗಾಡಲು ಅಗದಂತಹ ಸ್ಥಿತಿ, ಮನೆಯೊಳಗೆ ಎಲ್ಲಾ ವಸ್ತುಗಳು ಧೂಳಿನಿಣದ ಕೂಡಿದೆ, ಅಧಿಕಾರಿಗಳೊಂದಿಗೆ ನಮ್ಮ ಅಳಲನ್ನು ತೋರುಪಡಿಸಿದರೆ ಅಧಿಕಾರಿಗಳು ನಮ್ಮ ಮೇಲೆ ಇಲ್ಲಸಲ್ಲದ ಅರೋಪಗಳನ್ನು ಹೊರಿಸಿ ಪೋಲಿಸರಿಗೆ ದೂರು ನೀಡಿ ಬಂದಿಸುವುದಾಗಿ ಭೆದರಿಸುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು.
ಸುಮಾರು ೧೦ಕೋಟಿಗೂ ರೂ. ಮೀರಿದ ಮರಳು ಈ ನದಿಯ ದಡದಲ್ಲಿ ಶೇಖರಣೆಯಾಗಿದೆ, ಇದು ಸರಕಾರಕ್ಕೆ ಸೇರಬೇಕು. ಆದರೆ, ಅಧಿಕಾರಿಗಳ ಕುಮ್ಮಕ್ಕಿನಿಂದ ಪಟ್ಟಭದ್ರ ಹಿತಾಶಕ್ತಿಗಳು ಅಕ್ರಮವಾಗಿ ಕಾನೂನು ಕಟ್ಟಲೆಗಳನ್ನು ಗಾಳಿಗೆ ತೂರಿ ಮರಳು ಸಾಗಾಟ ನಮಡೆಸುತ್ತಿದ್ದಾರೆ. ಕೂಡಲೆ ಸಂಭಂದ ಪಟ್ಟ ಅಧಿಕಾರಿಗಳು ಇವರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ .ಗ್ರಾಪಂ ಸದಸ್ಯಪ್ರಸಾದ್ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷ ಕಿರಣ್, ದರ್ಮ, ಲಕ್ಷ್ಮೀ ಇನ್ನಿತರರು ಪಾಲ್ಗೊಂಡಿದ್ದರು.





