ಸಾವನ್ನೇ ಗೆದ್ದ ‘ಸಾಹಸಿಗ’ನ ಮಾದರಿ ಜೀವನವಿದು…

-ಶಂಶೀರ್ ಬುಡೋಳಿ
ಪತ್ರಕರ್ತ
Courtesy: Jolige Blog
………………………………
ಇದು ಅಂತಿಂಥ ಕಥೆಯಲ್ಲ..
ವಿಕಲಚೇತನರು ಎಷ್ಟೋ ಇರಬಹುದು…
ಆದ್ರೆ…
ಇದು ನಮ್ಮ ಬದುಕಿಗೆ ಪ್ರೇರಣೆ ನೀಡೋ ಯುವಕನ ಕಥೆಯಿದು…
ಸಾಧನೆ ಮಾಡಬೇಕು, ಜೀವನದಲ್ಲಿ ಎಂತಹ ಸಂದಿಗ್ಧ ಪರಿಸ್ಥಿತಿ ಬರಲಿ, ಅದನ್ನು ಮೆಟ್ಟಿ ನಿಂತು ಅಸಾಧ್ಯವಾದುದನ್ನು ಸಾಧಿಸಬೇಕು..ಇತರರಿಗೆ ಪ್ರೇರಣೆಯಾಗಿ ಬದುಕಬೇಕು…ಈ ಮಾತಿಗೆ ಪೂರಕವೆನಿಸೋ ಪ್ರತ್ಯಕ್ಷ ಸಾಕ್ಷಿ ಇಲ್ಲಿದೆ..ಅದ್ಯಾವುದು ಅಂತೀರಾ..ನೀವೇ ಓದಿ..ಜೊತೆಗೊಂದಿಷ್ಟು ಪ್ರೇರಣೆಯನ್ನು ನಿಮ್ಮದಾಗಿಸಿಕೊಳ್ಳಿ….
ಆಗಷ್ಟೇ ಪಿಯುಸಿಯಲ್ಲಿ ವಾಣಿಜ್ಯ ಶಿಕ್ಷಣ ಮುಗಿಸಿ ಬಿಕಾಂ ಪದವಿಗೆ ಸೇರಿದ್ದ ಆತ. ವಿಧಿಲೀಲೆಯೋ,ಕಾಕತಾಳಿಯವೋ ಗೊತ್ತಿಲ್ಲ. ಆತನಿಗೆ ಇದ್ದಕ್ಕಿದ್ದಂತೆ ಕಾಲು ನೋವು ಶುರುವಾಯಿತು..ಹೊಸದಾಗಿ ಪದವಿ ಕಾಲೇಜಿಗೆ ಸೇರಿದ್ದ ಈ ಹುಡುಗನಿಗೆ ಕಾಲು ನೋವಿನ ಜೊತೆ ಪರೀಕ್ಷಾ ಭಯವೂ ಶುರುವಾಯಿತು.ನೇರ ಬಂದವನೇ ‘ಅಮ್ಮಾ..ನನ್ನ ಕಾಲಲ್ಲಿ ನೋವು ಶುರುವಾಗಿದೆ. ಮುಂದೆ ಪರೀಕ್ಷೆ ಹೇಗೆ ಬರೆಯಲಿ’ ಎಂದು ತನ್ನ ಪ್ರೀತಿಯ ಅಮ್ಮನಲ್ಲಿ ನೋವು ತೋಡಿಕೊಂಡಾಗ,‘ಹೆದರಬೇಡಾ ಮಗ. ಅದ್ಯಾವುದೋ ಸಣ್ಣ ನೋವಾಗಿರಬಹುದು’ ಎಂದು ತನ್ನ ಗಂಡನಲ್ಲಿ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ರು…
ಇಲ್ಲೇ ಈ ಹೆತ್ತವರಿಗೆ ಆಘಾತಕಾರಿ ಸುದ್ದಿ ತಿಳಿದದ್ದು..
ತಮ್ಮ ಮುದ್ದಿನ ಮಗನಿಗೆ ಶುರುವಾಗಿರೋ ಕಾಲುನೋವು ಸಣ್ಣ ಮಟ್ಟದ್ದಲ್ಲ..ಅದೊಂದು ಜೀವವನ್ನೇ ಕೊಲ್ಲುವಂತಹ ನೋವೆಂದು…ಹೌದು. ಕಾಲುನೋವೆಂದು ಹೇಳಿದ ಆ ಹುಡುಗನಿಗೆ ಬೌನ್ ಕ್ಯಾನ್ಸರ್ ತಗುಲಿತ್ತು. ಈ ವಿಚಾರವನ್ನು ಆತನಿಗೆ ತಿಳಿಸದೇ ತಮ್ಮೊಳಗೆ ನುಂಗಿಕೊಂಡು ವೈದ್ಯರ ಆದೇಶದ ಮೇರೆಗೆ ಈ ಹೆತ್ತವರು ತಮ್ಮ ಕರುಳ ಕುಡಿಯನ್ನು ಉಳಿಸಲು ಇದ್ದ ಎಲ್ಲಾ ಚಿನ್ನಾಭರಣವನ್ನೆಲ್ಲಾ ಮಾರಿದ್ರು…ಸುಮಾರು 7 ಲಕ್ಷದಷ್ಟು ಹಣವನ್ನು ವ್ಯಯ ಮಾಡಿದ್ರು..ಈ ಎಲ್ಲಾ ಜೀವನ ಸಂಕಟದ ನಡುವೆ ಅದಕ್ಕಿಂತಲೂ ಚೆನ್ನಾಗಿ ಹೇಳುವುದಾದ್ರೆ ಬದುಕನ್ನೇ ಗೆದ್ದ ಈ ಸಾಹಸಿಗನೇ ಕುಪ್ಪೆಪದವಿನ ಹಸನಬ್ಬ-ದುಲೈಖಾ ದಂಪತಿಯ ದ್ವಿತೀಯ ಪುತ್ರನೇ ನಿಸಾರ್ ಅಹ್ಮದ್.

ನಿಸಾರ್ ಅಹ್ಮದ್‌ಗೆ ಕ್ಯಾನ್ಸರ್ ತಗುಲಿದಾಗ ಅಕ್ಷರಶ: ಈತ ಮಾಡಿದ ಸಾವು ಬದುಕಿನ ನಡುವಿನ ಹೋರಾಟದ ಕಥೆ ನಿಜಕ್ಕೂ ಕಣ್ಣನ್ನು ತೇವಗೊಳಿಸುವಂಥದ್ದು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ನಿಸಾರ್‌ನ್ನು ಬದುಕುವುದು ಕಷ್ಟ ಅಂತಾ ಹೇಳಿದ ವೈದ್ಯರು ಕೂಡಾ ಇದ್ರು. ಬದುಕುತ್ತಾನೆ ಅಂತಾ ಹೇಳಿದ ವೈದ್ಯರು ಕೂಡಾ ಇದ್ರು…ಇದೆಲ್ಲದರ ನಡುವೆ ನಿಸಾರ್ ಅಹ್ಮದ್ ಬದುಕಬೇಕೆಂದ್ರೆ ಅನಿವಾರ್ಯ ನೆಲೆಯಲ್ಲಿ ಒಂದು ಕಾಲನ್ನು ಮುರಿಯಬೇಕಾಗುತ್ತೆ ಅಂತಾ ಕ್ಯಾನ್ಸರ್ ಸ್ಪೆಷಲಿಸ್ಟ್ ಡಾ.ಸನತ್ ಹೆಗ್ಡೆ ಹಾಗೂ ಓರ್ಥೋಪೆಡಿಕ್ಸ್ ಡಾ.ದೀಪಕ್ ರೈ ನೀಡಿದ ಸಲಹೆ ಮೇರೆಗೆ ನಿಸಾರ್‌ರ ಹೆತ್ತವರು ಇದಕ್ಕೆ ಒಪ್ಪಿದ್ರು..ಒಂದು ಕಾಲನ್ನು ಕಳೆದುಕೊಂಡ್ರು ಸರಿ..ತನ್ನ ಮಗನ ಜೀವ ಉಳಿಸಬೇಕೆಂಬ ಈ ಹೆತ್ತವರ ಉದ್ದೇಶವನ್ನು ಈ ಇಬ್ಬರು ವೈದ್ಯರು ಈಡೇರಿಸಿದ್ರು..ಇದ್ರ ಜೊತೆಗೆ ಈತನ ಸಂಬಂಧಿಗಳು ನಿಸಾರ್ ಬದುಕಲಾರ ಅಂತಾ ಹೀಯಾಳಿಸಿದವರು ಇದ್ರು…ನಿಸಾರ್ ಬದುಕುತ್ತಾನೆ ಅಂತಾ ವಿಶ್ವಾಸ ಕೊಟ್ಟವರು ಇದ್ರು ಅಂತಾ ಹೇಳುತ್ತಾರೆ ನಿಸಾರ್‌ರ ತಾಯಿ ದುಲೈಖಾ. ಜೀವನ್ಮರಣ ಹೋರಾಟ ನಡೆಸುತ್ತಿದ್ದ ವೇಳೆಯಲ್ಲಿನ ಹಲವು ಜಂಜಾಟಗಳನ್ನು ಸದೆಬಡಿದು ತಮ್ಮ ಮಗನನ್ನು ಉಳಿಸಲು ಈ ಹೆತ್ತವರು ಸಫಲರಾದ್ರು…ಜೊತೆಗೆ ತನಗೆ ಒಂದು ಕಾಲು ಇಲ್ಲದಿದ್ರೂ ತಾನು ಬದುಕಬಲ್ಲೆ ಅಂತಾ ತೀರ್ಮಾನ ಮಾಡಿದ್ರು ನಿಸಾರ್ ಅಹ್ಮದ್…
ಇವ್ರ ಆಶಾಭಾವನೆಯೇ ನಮಗೊಂದಿಷ್ಟು ಪ್ರೇರಣೆ ಎಂಬ ಟಾನಿಕ್ ನೀಡುತ್ತೆ

ಹೌದು..ಭೀಕರ ರೋಗದಿಂದ ಪಾರಾದ ಹಾಗೂ ‘ವಿಭಿನ್ನಚೇತನ’ಅಂತಾ ಗುರುತಿಸಿಕೊಂಡ ನಿಸಾರ್ ಅಹ್ಮದ್ ಎಲ್ಲರಂತಲ್ಲ..ತಾನು ಆಸ್ಪತ್ರೆಯಲ್ಲಿದ್ದಾಗ ತನ್ನ ಉಳಿವಿಗಾಗಿ ಪ್ರಯತ್ನಪಟ್ಟಿದ್ದ ಹೆತ್ತವರು, ಸಹೋದರ, ಸಹೋದರಿ, ಕುಟುಂಬಿಕರ ಹಾಗೂ ಊರಿನ ಜನತೆ, ಕಾಲೇಜು ಸಿಬ್ಬಂದಿ ಹಾಗೂ ಸುಂಕದಕಟ್ಟೆ ಕಾಲೇಜಿನ ಟೀಚಿಂಗ್ ಸ್ಟಾಪ್ಸ್, ಪ್ರಾಧ್ಯಾಪಕರು ಹೀಗೆ ಮುಂತಾದವರನ್ನು ಅಭಿಮಾನದಿಂದ ನೆನೆಸಿಕೊಳ್ಳುವ ನಿಸಾರ್ ಇವರಿಗೆಲ್ಲಾ ನಾನು ಚಿರಖಿಣಿ ಎನ್ನುತ್ತಾರೆ. ರೋಗದಿಂದ ಪಾರಾಗಿದ್ರೂ ಒಂಟಿ ಕಾಲಿನ ಬದುಕು ತನಗೆ, ಹೆತ್ತವರಿಗೆ ಮುಳುವಾಗಬಾರದೆಂದು ತೀರ್ಮಾನಿಸಿದ ನಿಸಾರ್ ಅಹ್ಮದ್, ವಿದ್ಯಾಭ್ಯಾಸ ಮುಂದುವರೆಸುವ ತೀರ್ಮಾನ ಮಾಡಿಯೇ ಬಿಟ್ರು.. ಇಲ್ಲೇ ನಾವು ಕಲಿಯಬೇಕಾದಂತಹ ಅಂಶಗಳಿರೋದು…ಅದೇನು..ಮುಂದೆ ಓದಿ…
ಪಿಯುಸಿಯಲ್ಲಿ ವಾಣಿಜ್ಯ ವಿಷಯವನ್ನು ಅಧ್ಯಯನ ಮಾಡಿದ್ದ ನಿಸಾರ್, ಬಿಕಾಂ ಪದವಿಯ ಮೊದಲನೇ ವರ್ಷದಲ್ಲಿ ರೋಗಕ್ಕೆ ತುತ್ತಾದಾಗ ಅಕ್ಷರಶ: ಪದವಿ ಕನಸು ಭಗ್ನಗೊಂಡಿತ್ತು.ಜೊತೆಗೆ ಜೀವನದಲ್ಲಿನ ಉತ್ಸಾಹಗಳು ಕೂಡಾ..ಇದರಿಂದ ನಿರಾಶನಾಗದೇ ನಿಸಾರ್ ಅಹ್ಮದ್, ಸಫಲ ಚಿಕಿತ್ಸೆ ನಂತ್ರ ನೇರ ಹೆತ್ತವರ, ಕುಟುಂಬಿಕರ, ಊರ ಜನತೆಯ, ಸ್ನೇಹಿತರ ಬೆಂಬಲದೊಂದಿಗೆ ಮಂಗಳೂರಿನ ಕೆಪಿಟಿಯಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೋಮಾ ಮುಗಿಸಿದ್ರು…ಉತ್ತಮ ಅಂಕ ಪಡೆದು ಉತ್ತೀರ್ಣರಾದ ನಿಸಾರ್, ಮೈಸೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ.-ಎಲೆಕ್ಟ್ರಾನಿಕ್ಸ್ ಪದವಿ ಮುಗಿಸಿದ್ರು..ಇದುವೇ ಇವ್ರ ಜೀವನಕ್ಕೆ ಉತ್ತಮ ಅಡಿಪಾಯ ಹಾಕಿತು. ಅಂದು ಈತ ಬದುಕಲಾರ ಎಂದವರು ಈಗ ಅಬ್ಬಬ್ಬಾ..ಇವನೇ ರೋಲ್ ಮಾಡೆಲ್ ಅಂತಿದ್ದಾರೆ…ನಿಜಕ್ಕೂ ತನ್ನ ಜೀವನದಲ್ಲಿ ಬಂದೊರಗಿದ ಸಂಚಕಾರದಿಂದ ಧೃತಿಗೆಡದೇ ಬಿ.ಇ.ಪದವಿ ಮುಗಿಸಿ ಈಗ ಪ್ರತಿಷ್ಠಿತ ವೋಲ್ವೋ ಇಂಡಿಯಾ ಪ್ರೈ.ಲಿ. ಕಂಪನಿ(ಬೆಂಗಳೂರು)ಯಲ್ಲಿ ಗ್ರಾಜ್ಯುಯೆಟ್ ಟ್ರೈನಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾನು ಮೈಸೂರಿನಲ್ಲಿ ಬಿ.ಇ.ಪದವಿ ವಿಧ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ನ್ಯೂ ಮುಸ್ಲಿಂ ಹಾಸ್ಟೆಲ್‌ನ ಸಹಪಾಠಿಗಳು, ವಾರ್ಡನ್ ಪ್ರೊ.ಸಯ್ಯದ್ ಅಝಂ , ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶೇಕ್ ಅಲಿ ತುಂಬಾ ಸಹಕಾರ ನೀಡಿದ್ದರು.ಜೊತೆಗೆ ಸಾಧನೆ ಮಾಡುವಂತೆ, ಜೀವನದಲ್ಲಿ ಆಶಾಭಾವನೆ ತುಂಬಿಸಿದ್ರು ಅಂತಾ ಅಭಿಮಾನದಿಂದ ಕೊಂಡಾಡುತ್ತಾರೆ..ನಿಸಾರ್ ಅಹ್ಮದ್.
[Gallery not found]ಸದಾ ಮುಗುಳ್ನಗೆ ಬೀರೋ ನಿಸಾರ್ ಅಹ್ಮದ್ ಉತ್ತಮ ಕ್ರೀಡಾಪಟು ಕೂಡಾ ಹೌದು. ಇವ್ರ ಕ್ಯಾರಮ್, ಶಟಲ್ ಕಾಕ್,ಕಬಡ್ಡಿ, ಟೆಬಲ್ ಟೆನಿಸ್ ಆಡುತ್ತಾರೆ.ಜಾವೆಲಿನ್ ಥ್ರೋ, ಶಾಟ್‌ಫುಟ್ ಇವ್ರ ಫೇವರಿಟ್ ಆಟ.ಯೂಸುಫ್ ಪಠಾಣ್, ಸಚಿನ್ ತೆಂಡೂಲ್ಕರ್, ಸಾನಿಯಾ ಮಿರ್ಝಾ, ಹುಸೈನ್ ಬೋಲ್ಟ್ ಇವ್ರ ಫೇವರಿಟ್ ಆಟಗಾರರು. ಕಿಶೋರ್ ಕುಮಾರ್, ಮೈಕಲ್ ಜಾನ್ಸನ್ ಹಾಗೂ ಮುಹಮ್ಮದ್ ರಫಿಯವರನ್ನು ಇಷ್ಟಪಡೋ ನಿಸಾರ್ ಅಹ್ಮದ್ ಹಿಂದಿ, ಬ್ರಿಟಿಷ್ ಇಂಗ್ಲೀಷ್,ಕನ್ನಡ, ತುಳು, ಮಲಯಾಳಂ ಭಾಷೆಯಲ್ಲಿ ಮಾತಾಡುತ್ತಾರೆ. ಇದೀಗ ಇವರು ಬೆಂಗಳೂರಿನ ಕೆ.ಆರ್.ಪುರ ಸಮೀಪದ ರಾಮಮೂರ್ತಿನಗರದ ಎರ್ಯಾನ್‌ಪಾಳ್ಯದಲ್ಲಿ ಕುಟುಂಬಿಕರೊಂದಿಗೆ ವಾಸವಾಗಿದ್ದಾರೆ. ಸ್ನೇಹಿತರೆಂದ್ರೆ ಬಹಳ ಇಷ್ಟ ಪಡೋ ನಿಸಾರ್, ತನ್ನ ಜೀವದ ಉಳಿಸುವಿಕೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟ ಹೆತ್ತವರೇ ನನ್ನ ಬಾಳಿನ ಆಶಾಕಿರಣ ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ..
ಒಂಥರಾ ಸಾವನ್ನೇ ಗೆದ್ದ ಸಾಹಸಿಗನ ಜೀವನದಲ್ಲಿನ ಒಂದು ಪುಟದಲ್ಲಿನ ವಿಚಾರ ನಮ್ಮ ಜೀವನಕ್ಕೆ ಪ್ರೇರಣೆ ನೀಡಬಲ್ಲದ್ದು. ಸಮಾಜದಲ್ಲಿ ಎಷ್ಟೋ ಮಂದಿ ಅಂಗವಿಕಲರು, ವಿಕಲಚೇತನರು ಎಂದು ಕರೆಸಿಕೊಳ್ಳೋ ಮಂದಿ ಇರಬಹುದು..ಆದ್ರೆ ಇವರಲ್ಲಿ ನಮ್ಮ ಜೀವನಕ್ಕೆ ಪ್ರೇರಣೆ ಒದಗಿಸೋ, ಸಾಧನೆ ಮಾಡುವಂತೆ ಪ್ರೇರೆಪಿಸುವವರ ಸಾಲಲ್ಲಿ ನಿಲ್ಲವವರೇ ಈ ಕುಪ್ಪೆಪದವಿನ ನಿಸಾರ್ ಅಹ್ಮದ್..ಹ್ಯಾಟ್ಸ್ ಆಫ್ ನಿಸಾರ್ ಅಹ್ಮದ್…
Courtesy: www.budoli.wordpress.com






masha allah its a great effort he from our college student also class mate,may god bless him …..
I really appreciate you , wish u best of luck fr bright future.
masha allah hats up nisar,he is from my place kuppepadavu wish u all success of god future healt or wealth.
masha allah allahu khairakatt
masha allha, u are a great man, hard work is never die, keep it up, god bless u
thank u brothers:):)