|

ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಸಹೋದರರ ಸಾಹಸಗಾಥೆಯಿದು

೬ರ ಹರೆಯದಲ್ಲೇ ದಾಖಲೆ ಬರೆದ ಮುಂಬೈನ ಪೋರ!
……………………………………………………………

-ಶಂಶೀರ್ , ಬುಡೋಳಿ
ಪತ್ರಕರ್ತ
Courtsey: Jolige Blog

………………………………

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಂತರದ ಆಟಗಾರ ಯಾರು ಅಂತಾ ಪ್ರಶ್ನಿಸಿದ್ರೆ ಅದಕ್ಕೆ ಉತ್ತರ ವೀರೇಂದ್ರ ಸೆಹ್ವಾಗ್.ಹೌದು.ಸಚಿನ್ ನಂತರದ ಆಟಗಾರ ಸೆಹವಾಗ್ ಆಗಿರಬಹುದು. ಆದರೆ ಈಗ ಸಚಿನ್‌ರಂತೆ ಭವಿಷ್ಯದ ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆ ಬರೆಯಲು ೨ ಕ್ರಿಕೆಟಿಗರು ಹುಟ್ಟಿ ಬಂದಿದ್ದಾರೆ. ಅವರೇ ಸರ್ಫಾಝ್ ಖಾನ್ ಹಾಗೂ ಮುಶೀರ್ ಖಾನ್.


ಹೌದು. ಇದು ಕ್ರಿಕೆಟ್ ಜಮಾನ. ಅಂದು ತನ್ನ ೧೨ನೇ ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್, ೧೨ ವರ್ಷದೊಳಗಿನ ಹ್ಯಾರಿಸ್ ಶೀಲ್ಡ್ ಪಂದ್ಯಾವಳಿಯಲ್ಲಿ ಅಜೇಯ ೩೨೬ ರನ್ ಮಾಡಿ ದಾಖಲೆ ನಿರ್ಮಿಸಿದ್ದರು. ಇದನ್ನು ಕಳೆದ ೨ ವರ್ಷಗಳ ಹಿಂದೆಯಷ್ಟೇ ಹ್ಯಾರೀಸ್ ಶೀಲ್ಡ್ ಪಂದ್ಯಾವಳಿಯಲ್ಲಿ ಮುಂಬೈನ ಸರ್ಫಾಝ್ ಖಾನ್ ಎಂಬ ಬಾಲಕ ೪೩೮ ರನ್ ಬಾರಿಸುವ ಮೂಲಕ ಸಚಿನ್ ದಾಖಲೆಯನ್ನೇ ಮುರಿದು ಆ ದಾಖಲೆಯನ್ನು ತನ್ನದಾಗಿಸಿಕೊಂಡ. ಈ ಮೂಲಕ ಈ ಬಾಲಕ ತಾನು ಭವಿಷ್ಯದ ಸಚಿನ್ ಎಂದು ಸಾಬೀತುಪಡಿಸಿದ. ಈಗ ಈತನ ತಮ್ಮ ಆರರ ಹರೆಯದ ಮುಶೀರ್ ಖಾನ್ ಹೊಸ ದಾಖಲೆಯನ್ನು ದಾಖಲಿಸಿದ್ದಾನೆ.
೬ ವರ್ಷ ಹಾಗೂ ೯ ತಿಂಗಳ ಹರೆಯದ ಮುಶೀರ್ ಖಾನ್ ೧೧೪ ವರ್ಷಗಳ ಭವ್ಯ ಇತಿಹಾಸ ಹೊಂದಿರೋ ಅಂತರ್ ಶಾಲಾ ಗೈಲ್ಸ್ ಶಿಲ್ಡ್ ಯು-೧೪ ಕ್ರಿಕೆಟ್ ಪಂದ್ಯಾಟದಲ್ಲಿ ಆಡುವ ಅವಕಾಶ ಪಡೆದುಕೊಂಡು ದಾಖಲೆ ಬರೆದಿದ್ದಾನೆ. ಮುಶೀರ್ ಖಾನ್ ಮುಂಬೈನ ಅಂಜುಮಾನ್-ಐ-ಇಸ್ಲಾಂ ಅಲ್ಲನಾ ಇಂಗ್ಲೀಷ್ ಸ್ಕೂಲ್‌ನ ವಿದ್ಯಾರ್ಥಿ. ಎಡಗೈ ಸ್ಪಿನ್ನರ್ ಆಗಿರೋ ಈತ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಹೊತ್ತಿದ್ದಾನೆ. ಈ ಪಂದ್ಯಾಟದಲ್ಲಿ ಚೊಚ್ಚಲ ಪ್ರವೇಶ ಮಾಡಿದ ಮುಶೀರ್ ಖಾನ್ ಬ್ಯಾಟಿಂಗ್‌ನಲ್ಲಿ ೨೮ ಎಸೆತಗಳಲ್ಲಿ ೩ ರನ್ ಹಾಗೂ ಬೌಲಿಂಗ್‌ನಲ್ಲಿ (೫-೧-೧೨-೦) ವಿಕೆಟ್ ಪಡೆಯದಿದ್ದರೂ ಚೊಚ್ಚಲ ಅವಕಾಶ ಪಡೆಯೋ ಮೂಲಕ ದಾಖಲೆ ಬರೆದಿದ್ದಾನೆ. ಎಡಗೈ ಬ್ಯಾಟ್ಸ್‌ಮನ್ ಆಗಿರೋ ಮುಶೀರ್ ಖಾನ್, ತಾನು ನ್ಯೂಜಿಲಾಂಡ್‌ನ ಸ್ಪಿನ್ನರ್ ಡೆನಿಯಲ್ ವೆಟೋರಿಯ ಅಭಿಮಾನಿ ಅಂತಾ ಮುಗ್ದ ನುಡಿಯಲ್ಲಿ ಹೇಳುತ್ತಾನೆ.
ಮುಶೀರ್ ಖಾನ್ ತಂದೆ ನೌಶಾದ್ ಖಾನ್ ಓರ್ವ ಕ್ರಿಕೆಟ್ ಕೋಚ್. ಇವರು ಕ್ರಿಕೆಟಿಗರಾದ ಇಕ್ಬಾಲ್ ಅಬ್ದುಲ್ಲಾ(ಕೋಲ್ಕತಾ ನೈಟ್ ರೈಡರ‍್ಸ್),
ಕಮ್ರಾನ್ ಖಾನ್(ರಾಜಸ್ಥಾನ ರಾಯಲ್ಸ್) ಹಾಗೂ ೧೯ ವರ್ಷದೊಳಗಿನ ತಂಡದ ಆಟಗಾರ ಸೂಫಿಯನ್ ಶೇಖ್, ರಾಹೀಲ್ ಶೇಖ್ (ಮುಂಬೈ ಇಂಡಿಯನ್ಸ್)ಹಾಗೂ ಇನ್ನಿತರ ಮುಂಬೈ ಕ್ರಿಕೆಟಿಗರ ಕೋಚ್ ಆಗಿದ್ದಾರೆ. ತನ್ನ ೬ರ ಹರೆಯದ ಮಗ ಮುಶೀರ್ ಖಾನ್ ಹಾಗೂ ಸರ್ಫಾಝ್ ಖಾನ್‌ರ ಮೇಲೆ ಭಾರೀ ಭರವಸೆ ಇಟ್ಟಿರೋ ತಂದೆ ನೌಶಾದ್ ಖಾನ್ ಇವರಿಬ್ಬರಿಗೆ ಕೋಚಿಂಗ್ ನೀಡುತ್ತಿದ್ದಾರೆ. ಭವಿಷ್ಯದ ಪ್ರತಿಭಾವಂತ ಕ್ರಿಕೆಟಿಗನಾಗುವ ಲಕ್ಷಣವಿರುವ ಮುಶೀರ್ ಖಾನ್ ಪ್ರತಿದಿನ ಕಠಿಣ ತರಬೇತಿ ನಡೆಸುತ್ತಾನೆ. ಪ್ರತಿದಿನ ಬೆಳಿಗ್ಗೆ ೫ ಗಂಟೆಗೆ ಎದ್ದು ಮುಂಬೈನ ಅಝಾದ್ ಮೈದಾನ್ ಗ್ರೌಂಡ್‌ಗೆ ಹೋಗಿ ಅಭ್ಯಾಸ ನಡೆಸುತ್ತಾನೆ. ಬಳಿಕ ಟೀಚರ್ ಹಿತೇಶ್ ದೋಶಿಯವರಿಂದ ಟ್ಯೂಷನ್ ಪಡೆಯುತ್ತಾನೆ. ಬಳಿಕ ಸಂಜೆ ೪ ಗಂಟೆಗೆ ಮತ್ತೆ ಅಭ್ಯಾಸ ನಡೆಸುತ್ತಾನೆ. ಬಳಿಕ ತನ್ನ ತಂದೆಯೊಟ್ಟಿಗೆ ರಾತ್ರಿ ೮ ಗಂಟೆಗೆ ಮನೆಗೆ ಹೋಗುತ್ತಾನೆ. ತಂದೆಯ ಬಳಿ ತರಬೇತಿ ಪಡೆಯೋ ಜೊತೆಗೆ ಭಾರತೀಯ ಹಿರಿಯ ಕ್ರಿಕೆಟಿಗ ಸುನೀಲ್ ಗಾವಸ್ಕರ್‌ರಿಂದ ಕೂಡಾ ಮುಶೀರ್ ಖಾನ್ ಮತ್ತು ಸರ್ಫಾಝ್ ಖಾನ್ ಬ್ಯಾಟಿಂಗ್ ತರಬೇತಿ ಪಡೆಯುತ್ತಿದ್ದಾರೆ. ಇವನ ಅಣ್ಣ ಸರ್ಫಾಝ್ ಸಚಿನ್ ದಾಖಲೆಯನ್ನು ಮುರಿದಾಗ ಸಮಾರಂಭವೊಂದರಲ್ಲಿ ಈತನನ್ನು ಭೇಟಿ ಮಾಡಿದ ಸುನೀಲ್ ಗಾವಸ್ಕರ್, ಪ್ರತಿದಿನ ೫ ಗಂಟೆಗೆ ಎದ್ದು ಅಭ್ಯಾಸ ನಡೆಸುವಂತೆ ಹಾಗೂ ರಾತ್ರಿ ೯ ಗಂಟೆಗೆ ಮಲಗುವಂತೆ ಸೂಚನೆ ನೀಡಿದ್ದಾರಂತೆ.
ಏನೇ ಆಗಲಿ ಮುಂಬೈನ ಸರ್ಫಾಝ್ ಖಾನ್ ಹಾಗೂ ಮುಶೀರ್ ಖಾನ್ ಮುಂದೆ ಟೀಮ್ ಇಂಡಿಯಾದ ಆಟಗಾರರಾಗಲಿ. ಈ ಮೂಲಕ ತನ್ನ ತಂದೆಯ ಹಾಗೂ ಸುನೀಲ್ ಗಾವಸ್ಕರ್‌ರ ಕನಸನ್ನು ನನಸಾಗಿಸಲಿ ಎಂಬುದೇ ನಮ್ಮ ಹಾರೈಕೆ.

Courtesy: www.budoli.wordpress.com

————– ವಿಶ್ವ ಕನ್ನಡಿಗ ನ್ಯೂಸ್ ಈಗ www.vknews.in ನಲ್ಲೂ ಲಭ್ಯ ————–

Posted by on Dec 19 2011. Filed under ಲೇಖನಗಳು. You can follow any responses to this entry through the RSS 2.0. Both comments and pings are currently closed.

Comments are closed

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ಶುಭಹಾರೈಕೆ….

ಶುಭಹಾರೈಕೆ….

ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ವರದಿಗಾರರಾದ ನಿತಿನ್ ರೈ ಕುಕ್ಕುವಳ್ಳಿ ಅವರ ದ್ವಿತೀಯ ವಿವಾಹ ವಾರ್ಷಿಕಕ್ಕೆ ಶುಭ ಹಾರೈಸುವ .....

ಸಂಪಾದಕೀಯ ಮಂಡಳಿ,
ವಿಶ್ವಕನ್ನಡಿಗ ನ್ಯೂಸ್.

***********************************************************

ಜನಪ್ರಿಯ ಸುದ್ದಿಗಳು

ದಿನವಹಿ ಸುದ್ದಿಗಳು

Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************